ಬಂಟ್ವಾಳ, ಡಿಸೆಂಬರ್ 28, 2021 (ಕರಾವಳಿ ಟೈಮ್ಸ್) : ಕರ್ನಾಟಕ ತೆಂಗು ಸೌಹಾದರ್À ಸಹಕಾರಿ ನಿ ಬಂಟ್ವಾಳ ಆಶ್ರಯದಲ್ಲಿ ರೈತ ಉತ್ಪಾದಕರ ಕಂಪೆನಿ ರಚನೆ ಮತ್ತು ಪದಾಧಿಕಾರಿಗಳ ಆಯ್ಕೆ ಸಭೆ ಬಂಟ್ವಾಳ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಅಧ್ಯಕ್ಷ ರಾಜಾ ಬಂಟ್ವಾಳ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಕೇಶವಮೂರ್ತಿ ಮಾತನಾಡಿ ಎಫ್‍ಪಿಒ (ರೈತ ಉತ್ಪಾದಕ ಕಂಪೆನಿ) ಮಾಡುವ ಕುರಿತ ಕಾನೂನು, ಕೇಂದ್ರ ಸರಕಾರದ ನಿಯಮಾವಳಿ, ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಅದಕ್ಕಿರುವ ಸಹಾಯ, ರೈತರಿಗೆ ಸಿಗುವ ಸವಲತ್ತು, ಪ್ರತೀ ಗ್ರಾಮ ಮಟ್ಟದಲ್ಲಿ ಸದಸ್ಯರನ್ನು ನೋಂದಾಯಿಸಿ, ನಿರ್ದೇಶಕರ ಆಯ್ಕೆ ಮಾಡುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ತಾಲೂಕಿನ ಕಂದಾಯ ಗ್ರಾಮ ಮಿತಿಯಲ್ಲಿ ಪ್ರತೀ ಗ್ರಾಮದಿಂದ ತಲಾ 20 ಸದಸ್ಯ ರೈತ ಆಸಕ್ತ ಗುಂಪನ್ನು ರಚಿಸುವುದು. ಪ್ರತೀ ರೈತರಿಗೆ ಗರಿಷ್ಟ 2ಸಾವಿರ ರೂಪಾಯಿ ಪಾಲು ತೊಡಗಿಸಲು ಅವಕಾಶ ಕಲ್ಪಿಸಿ ರೈತರನ್ನು ಸದಸ್ಯರಾಗಿ ನೋಂದಾಯಿಸುವುದಕ್ಕೆ ಅವಕಾಶ ಇದೆ ಎಂದರು.
ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ ಮಾತನಾಡಿ ಕಂಪೆನಿಯನ್ನು ಮಾಡಿದಾಗ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಆನ್‍ಲೈನ್ ಮೂಲಕ ದೇಶದ ಇತರ ಭಾಗಗಳಲ್ಲಿ ಮಾರಾಟ ಮಾಡಿ ಗರಿಷ್ಟ ಲಾಭವನ್ನು ಪಡೆಯಲು ಅವಕಾಶ ಇದೆ. ಒಬ್ಬ ವ್ಯಕ್ತಿಗಿಂತ ಒಂದು ಸಂಸ್ಥೆಯಾಗಿ ಇಂತಹ ನೇರ ವ್ಯವಹಾರ ಮಾಡಲು ಸುಲಲಿತ ಆಗುವುದು. ರೈತರ ಗುಂಪಿಗೆ ನೀಡುವ ಯಂತ್ರೋಪಕರಣಗಳು ಶೇ 90ರ ಸಹಾಯಧನದಲ್ಲಿ ಸಿಗುವುದು ಎಂದರು.
ಮೇಲ್ವಿಚಾರಕ ಯೋಗೀಶ ಎಚ್, ಪ್ರಮುಖರಾದ ದೇವಪ್ಪ ಕುಲಾಲ್ ಪಂಜಿಕಲ್ಲು, ಆನಂದ ಎ ಶಂಭೂರು, ನಿರಂಜನ ಸೇಮಿತ ಬಡಗಬೆಳ್ಳೂರು, ಅರ್ವಿನ್ ಡಿಸೋಜ ಲೊರೆಟ್ಟೊ, ಎಡ್ವರ್ಡ್ ಫೆರ್ನಾಂಡಿಸ್ ಬೆಂಜನಪದವು, ನಾರಾಯಣ ಪೂಜಾರಿ ದರ್ಖಾಸು, ಕೃಷ್ಣಪ್ಪ ಸಪಲ್ಯ ಅಂತರ, ಪ್ರಕಾಶ ಭಂಡಾರಿ ಸೊರ್ನಾಡು, ಬಾಬು ಪೂಜಾರಿ ಕರ್ಬೆಟ್ಟು, ಗಿಲ್ಬರ್ಟ್ ವಾಸ್ ಬೋಳಂತೂರು, ಯೋಗೀಶ ಸಪಲ್ಯ ಬೋಳಂತೂರು, ಪ್ರಮೋದ್ ಕೇದಿಗೆ, ತಿಮ್ಮಪ್ಪ ಭಂಡಾರಿ ಪೆÇಯಿತ್ತಾಜೆ, ಚಂದ್ರಶೇಖರ ಕಲ್ಯಾಣಾಗ್ರಹಾರ, ನಾಗೇಶ ಕಲ್ಯಾರು, ಸಂದೀಪ್ ಕೊರಗಟ್ಟೆ, ನ್ಯಾಯವಾದಿ ರವೀಂದ್ರ ಕುಕ್ಕಾಜೆ, ಸಹಕಾರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷಿತ್, ಪ್ರೇಮನಾಥ ಶೆಟ್ಟಿ ಅಂತರ ನರಿಕೊಂಬು ಮೊದಲಾದವರು ಸಭೆಯಲ್ಲಿ ಪಾಲ್ಗೊಂಡಿದ್ದರು.
0 comments:
Post a Comment