ಬಂಟ್ವಾಳ, ಡಿಸೆಂಬರ್ 19, 2021 (ಕರಾವಳಿ ಟೈಮ್ಸ್) : ಬಂಟ್ವಾಳ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ (ನಿ) ಇದರ 2020-2021ನೇ ಸಾಲಿನ ವಾರ್ಷಿಕ ಮಹಾ ಸಭೆಯು ಬಿ.ಸಿ.ರೋಡ್ ಹೊಟೇಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.
ಸಭೆ ಉದ್ಘಾಟಿಸಿದ ಸೊಸೈಟಿ ಅಧ್ಯಕ್ಷ ಬಿ. ರಮಾನಾಥ ರೈ ಮಾತನಾಡಿ, 2019-2021ನೇ ವರ್ಷದಲ್ಲಿ ಸೊಸೈಟಿಯು ಒಟ್ಟು 16,81,69,392 ರೂಪಾಯಿಗಳ ವ್ಯವಹಾರ ನಡೆಸಿ 2020-2021ನೇ ವರ್ಷದಲ್ಲಿ 4,52,191 ರೂಪಾಯಿ ಲಾಭಾಂಶ ಹೊಂದಿ ಗ್ರಾಹಕರ ಪ್ರೀತಿ ಗಳಿಸುವಲ್ಲಿ ಯಶಸ್ವಿಯಾಗಿದೆ ಎಂದರು. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶಾಖೆಗಳನ್ನು ತೆರೆದು ಗ್ರಾಮೀಣ ಪ್ರದೇಶದ ಜನರಿಗೆ ಆರ್ಥಿಕ ಶಕ್ತಿ ನೀಡಲು ನಮ್ಮ ಸೊಸೈಟಿಯು ಸಿದ್ಧವಿದೆ ಎಂದರು.
ಮುಖ್ಯ ಕಾರ್ಯನಿರ್ವಣಾಧಿಕಾರಿ ಬೇಬಿ ಕುಂದರ್ ವಾರ್ಷಿಕ ವರದಿ ವಾಚಿಸಿದರು. ನಿರ್ದೇಶಕರಾದ ನಾರಾಯಣ ನಾಯ್ಕ ಲೆಕ್ಕಪತ್ರ ಮಂಡಿಸಿದರು. ಶಾಖಾಧಿಕಾರಿ ಕಾವ್ಯ ಶ್ರೀ ಮಹಾಸಭೆಯ ನೋಟಿಸ್ ಹಾಗೂ ಮುಂದಿನ ವರ್ಷದ ಆಯ ವ್ಯಯ ಮಂಡಿಸಿದರು. ಉಪಾಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ನಿರ್ದೇಶಕರಾದ ಚಂದ್ರ ಪ್ರಕಾಶ್ ಶೆಟ್ಟಿ, ಪದ್ಮಶೇಖರ ಜೈನ್, ಬಿ ಎಂ ಅಬ್ಬಾಸ್ ಅಲಿ, ಅಲ್ಫೊನ್ಸ್ ಮಿನೇಜೆಸ್, ಮಂಜುಳಾ ಕುಶಲ ಪೆರಾಜೆ, ಅಮ್ಮು ಅರ್ಬಿ ಗುಡ್ಡೆ, ಸಿಬ್ಬಂದಿಗಳಾದ ಶೈಲೇಶ್ ಗೌಡ, ರಂಜಿತಾ ನಾಯ್ಕ ಉಪಸ್ಥಿತರಿದ್ದರು.
ನಿರ್ದೇಶಕ ಎಂ.ಎಸ್. ಮುಹಮ್ಮದ್ ಸ್ವಾಗತಿಸಿ, ಸುದರ್ಶನ್ ಜೈನ್ ವಂದಿಸಿದರು. ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment