ಬಂಟ್ವಾಳ, ನವೆಂಬರ್ 13, 2021 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ತೌಫೀಕ್ ಸಮೂಹ ಸಂಸ್ಥೆಗಳ ಮಾಲಕರಾಗಿದ್ದ ದಿವಂಗತ ಹಾಜಿ ಅಬ್ದುಲ್ ರಹಿಮಾನ್ (ಅದ್ದ ಹಾಜಿ ತೌಫೀಕ್) ಅವರ ಪತ್ನಿ ಝೈನಬಾ (77) ಅವರು ಅಲ್ಪ ಕಾಲದ ಅನಾರೋಗ್ಯದಿಂದ ಶನಿವಾರ ಮುಂಜಾನೆ ಆಲಡ್ಕದಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಮೃತರು ಕರ್ನಾಟಕ ಮುಸ್ಲಿಂ ಜಮಾಅತ್ ಬಂಟ್ವಾಳ ತಾಲೂಕು ಘಟಕಾಧ್ಯಕ್ಷ, ಬಂಟ್ವಾಳ ಪುರಸಭಾ ಮಾಜಿ ಸದಸ್ಯ ಹಾಜಿ ಪಿ. ಮುಹಮ್ಮದ್ ರಫೀಕ್ ತೌಫೀಕ್ ಸಹಿತ ಐವರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಶನಿವಾರ ಮಧ್ಯಾಹ್ನದ ವೇಳೆಗೆ ಆಲಡ್ಕ ಬದ್ರಿಯಾ ಮಸೀದಿಯಲ್ಲಿ ದಫನ ಕಾರ್ಯ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
0 comments:
Post a Comment