ಪುತ್ತೂರು, ನವೆಂಬರ್ 18, 2021 (ಕರಾವಳಿ ಟೈಮ್ಸ್) : ಫಾಸ್ಟ್ ಫುಡ್ ಅಂಗಡಿಯಲ್ಲಿ ದರದ ವಿಚಾರಕ್ಕೆ ಸಂಬಂಧಿಸಿದಂತೆ ಅಪರಿಚಿತ ತಂಡವೊಂದು ಅಂಗಡಿ ಕೆಲಸದವನಿಗೆ ಹಲ್ಲೆ ನಡೆಸಿದ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕು, ನೆಕ್ಕಿಲಾಡಿ ಗ್ರಾಮದ ಆದರ್ಶನಗರ ನಿವಾಸಿ ಉಸ್ಮಾನ್ ಅವರ ಪುತ್ರ ಮಹಮ್ಮದ್ ಬಾತಿಶ್ (20) ಉಪ್ಪಿನಂಗಡಿ ಗ್ರಾಮದ ಉಲ್ಲಾಸ್ ಜಂಕ್ಷನ್ ಬಳಿ ಇರುವ ಇಲ್ಯಾಸ್ ಎಂಬವರಿಗೆ ಸೇರಿದ ಫಾಸ್ಟ್ ಫುಡ್ ಕ್ಯಾಂಟೀನಿನಲ್ಲಿ ಕೆಲಸ ಮಾಡುತ್ತಿದ್ದು, ಬುಧವಾರ ರಾತ್ರಿ ಸುಮಾರು 10.30 ಗಂಟೆ ವೇಳೆಗೆ 4 ಮಂದಿ ಅಪರಿಚಿತರು ಫಾಸ್ಟ್ ಫುಡ್ ತಿನ್ನಲು ಬಂದು ಫಾಸ್ಟ್ ಫುಡ್ ಆರ್ಡರ್ ಮಾಡಿದ ಬಳಿಕ ದರ ಕೇಳಿ ಫಾಸ್ಟ್ ಫುಡ್ಡಿಗೆ ದರ ಏರಿಸಿದ್ದೀರಾ ಎಂದು ಅವ್ಯಾಚ್ಯ ಶಬ್ದಗಳಿಂದ ಬೈದು ನಿಂದಿಸಿದ್ದಲ್ಲದೆ ಅಂಗಡಿಯ ಟರ್ಪಾಲಿಗೆ ಕಟ್ಟಿದ್ದ ರಾಡ್ ಎಳೆದು ದೇಹದ ವಿವಿಧ ಭಾಗಗಳಿಗೆ ಹಲ್ಲೆ ನಡೆಸಿದಿ ದೂಡಿ ಹಾಕಿ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಬಾತಿಶ್ ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 141/2021 ಕಲಂ 504, 324, 323, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment