ಮಂಗಳೂರು, ನವೆಂಬರ್ 01, 2021 (ಕರಾವಳಿ ಟೈಮ್ಸ್) : ನಗರದ ನೆಹರೂ ಮೈದಾನದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟಡ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ಸಚಿವರ ಕೈಯಿಂದ ಆರೋಹಣಗೊಂಡ ರಾಷ್ಟ್ರಧ್ವಜ ತಲೆ ಕೆಳಗಾಗಿ ಹಾರಿ ಮುಜುಗರಕ್ಕೆ ಕಾರಣವಾಯಿತು.
ನಗರದ ನೆಹರು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ರಾಜ್ಯೋತ್ಸವದಲ್ಲಿ ಸಚಿವ ಅಂಗಾರ ಅವರು ರಾಷ್ಟ್ರ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಈ ಎಡವಟ್ಟು ಬಯಲಾಗಿದೆ. ಸಿಬ್ಬಂದಿಗಳ ಎಡವಟ್ಟಿನಿಂದ ಬಾವುಟ ಉಲ್ಟಾ ಹಾರುವಂತಾಗಿದೆ ಎನ್ನಲಾಗಿದೆ. ಬಾವುಟ ಉಲ್ಟಾ ಹಾರುತ್ತಿದ್ದಂತೆ ತಕ್ಷಣ ಎಚ್ಚೆತ್ತ ಅಧಿಕಾರಿಗಳು ರಾಷ್ಟ್ರ ಧ್ವಜವನ್ನು ಸರಿಯಾಗಿ ಹಾರಿಸುವ ಕಾರ್ಯ ಮಾಡಿದ್ದಾರೆ.
0 comments:
Post a Comment