ಬಂಟ್ವಾಳ, ನವೆಂಬರ್ 03, 2021 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಕಳೆದ ಕೆಲ ದಿನಗಳಿಂದ ನಿತ್ಯ ಮಳೆ ಸುರಿಯಲಾರಂಭಿಸಿದ್ದು, ವಿವಿಧೆಡೆ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿದೆ.
ತಾಲೂಕಿನ ಶಂಭೂರು ಗ್ರಾಮದ ದೇವಕಿ ಕೋಮ ಶ್ರೀಕಾಂತ್ ಅವರ ವಾಸದ ಮನೆಗೆ ಮಳೆಯಿಂದ ಹಾನಿ ಸಂಭವಿಸಿದೆ. ಮಾಣಿ ಗ್ರಾಮದ ವನಜಾಕ್ಷಿ ಕೋಂ ಗೋಪಾಲ ಆಳ್ವ ಅವರ ಅಡಿಕೆ ಮರ ಸಿಡಿಲಿಗೆ ಹಾನಿಯಾಗಿರುತ್ತದೆ.
ಬಿ ಮೂಡ ಗ್ರಾಮದ ನಂದರಬೆಟ್ಟು ನಿವಾಸಿ ಬೀಫಾತುಮ್ಮ ಕೋಂ ಹಮ್ಮಬ್ಬ ಅವರ ವಾಸ್ತವ್ಯದ ಮನೆಯ ಮೇಲ್ಛಾವಣಿ ಹಾನಿಯಾಗಿದೆ ಎಂದು ಬಂಟ್ವಾಳ ತಾಲೂಕು ಕಚೇರಿ ಮಳೆ ಹಾನಿ ವಿಭಾಗದ ವಿಷಯ ನಿರ್ವಾಹಕ ವಿಶು ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
0 comments:
Post a Comment