ಮಂಗಳೂರು, ನವೆಂಬರ್ 05, 2021 (ಕರಾವಳಿ ಟೈಮ್ಸ್) : ಕೇಂದ್ರ ಹಾಗೂ ರಾಜ್ಯ ಸರಕಾರದ ವಿವಿಧ ನಿವೃತ್ತ ಪಿಂಚಣಿದಾರರು ಹಾಗೂ ಇಪಿಎಫ್‍ಒ ಅಡಿಯಲ್ಲಿ ನೊಂದಾಯಿತ ಸಂಸ್ಥೆಗಳ ನಿವೃತ್ತ ಪಿಂಚಣಿದಾರರು (ಬೀಡಿ ಕಾರ್ಮಿಕರು, ಗೇರು ಫ್ಯಾಕ್ಟರಿಗಳ ಕಾರ್ಮಿಕರು ಇತ್ಯಾದಿ) ಪ್ರತೀ ವರ್ಷ ನವಂಬರ್ ತಿಂಗಳಲ್ಲಿ ‘ಜೀವನ್ ಪ್ರಮಾಣ್’ ಪತ್ರವನ್ನು ಸಲ್ಲಿಸಬೇಕಾಗುತ್ತದೆ. ಅಂದರೆ ಪಿಂಚಣಿಯು ಮುಂದುವರಿಯಲು ತಾವು ಜೀವಂತ ಇರುವುದರ ಬಗ್ಗೆ ದೃಢೀಕರಣ ಪತ್ರ ನೀಡಬೇಕಾಗುತ್ತದೆ. ಇದನ್ನು ಸಾಮಾನ್ಯವಾಗಿ ಪಿಂಚಣಿ ಪಡೆಯುವ ಬ್ಯಾಂಕ್ ಶಾಖೆಗಳಲ್ಲಿ ಪಿಂಚಣಿದಾರರು ಕೆಲ ವರ್ಷಗಳ ಹಿಂದಿನವರೆಗೆ ಖುದ್ದಾಗಿ ಭೇಟಿ ನೀಡಿ ಅರ್ಜಿ ಭರ್ತಿ ಮಾಡಿ ನೀಡಬೇಕಾಗಿತ್ತು.
ಖುದ್ದು ಭೇಟಿ ನೀಡಬೇಕಾಗುವ ಅನಿವಾರ್ಯತೆಯಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಆಧಾರ್ ಆಧಾರಿತ “ಜೀವನ್ ಪ್ರಮಾಣ್’ ಎಂಬ ಅಜೀವ ಪ್ರಮಾಣ ಪತ್ರದ ವ್ಯವಸ್ಥೆಯನ್ನು ಕೇಂದ್ರ ಸರಕಾರವು 2014ರಲ್ಲಿ ಆರಂಭಿಸಿತು. ಈ ವ್ಯವಸ್ಥೆಯಲ್ಲಿ ಪಿಂಚಣಿದಾರರು ದೇಶದ/ ಜಗತ್ತಿನ ಯಾವ ಮೂಲೆಯಿಂದಲೂ ಬಯೋಮೆಟ್ರಿಕ್ ದೃಢೀಕರಣದ ಮೂಲಕ “ಜೀವನ್ ಪ್ರಮಾಣ್” ಪತ್ರವನ್ನು ಪಿಂಚಣಿ ನೀಡುವ ಇಲಾಖೆಗೆ ಡಿಜಿಟಲ್ ಮೂಲಕವಾಗಿ ಕಳುಹಿಸುವ ಸೌಕರ್ಯವಿದೆ. ಆಂದರೆ ಪಿಂಚಣಿದಾರರು ಯಾವುದೇ ಊರಿನಿಂದ ಜೀವನ್ ಪ್ರಮಾಣ್ ತಂತ್ರಾಶದ ಮೂಲಕ ದೃಢೀಕರಣ ನೀಡಿದಾಗ ಅವರ ಅಜೀವ ಪ್ರಮಾಣ ಪತ್ರ ತಕ್ಷಣ ಪಿಂಚಣಿ ನೀಡುವ ಇಲಾಖೆ/ ಸಂಸ್ಥೆಗೆ ಡಿಜಿಟಲ್ ಮಾದ್ಯಮದ ಮೂಲಕವಾಗಿ ತಲುಪತ್ತದೆ.
ಪಿಂಚಣಿದಾರಾರ ವಯಸ್ಸು, ಪ್ರಸ್ತುತ ಕೋವಿಡ್ ಸನ್ನೀವೇಶ ಹಾಗೂ ಸಮಯದ ವ್ಯಯವನ್ನು ನಿವಾರಿಸಲು ಸರಕಾರವು ಭಾರತೀಯ ಅಂಚೆ ಇಲಾಖೆಯ ಮುಖಾಂತರ ಇಂಡಿಯಾ ಪೆÇೀಸ್ಟ್ ಪೇಮೆಂಟ್ ಬ್ಯಾಂಕ್ ವತಿಯಿಂದ ಮನೆ ಬಾಗಿಲಲ್ಲಿ ಅಥವಾ ಸಮೀಪದ ಅಂಚೆ ಕಛೇರಿಗಳಲ್ಲಿ ‘ಜೀವನ್ ಪ್ರಮಾಣ’ ಪತ್ರವನ್ನು ಸಲ್ಲಿಸುವ ವ್ಯವಸ್ಥೆ ಮಾಡಿದೆ. ಮೊಬೈಲ್ ಹಾಗೂ ಬಯೋಮೆಟ್ರಿಕ್ ಮೂಲಕ ಈ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ.
ಈ ವ್ಯವಸ್ಥೆ ಬಂದಿದ್ದರೂ ಬಹುತೇಕ ಮಂದಿ, ಖುದ್ದಾಗಿ ಪಿಂಚಣಿ ನೀಡುವ ಬ್ಯಾಂಕ್ ಖಾತೆಯ ಶಾಖೆಗೆ ಬೇಟಿ ನೀಡಿಯೇ ಜೀವನ್ ಪ್ರಮಾಣ್ ಪತ್ರಕ್ಕೆ ದೃಢೀಕರಣ ನೀಡುತಿದ್ದರು. ಈಗ ಈ ಹೊಸ ಸೌಲಭ್ಯದಿಂದ ಯಾವುದೇ ಪಿಂಚಣಿದಾರರು ತಮ್ಮ ಪೆÇೀಸ್ಟ್ ಮ್ಯಾನ್ ಅಥವಾ ಅಂಚೆ ಕಚೀರಿಯನ್ನು ಸಂಪರ್ಕಿಸಿ ಈ ಹೊಸ ಸೇವೆಯ ಪ್ರಯೋಜನವನ್ನು ಪಡೆದು ಕೊಳ್ಳಬಹುದು. ಇದರ ಶುಲ್ಕ ಕೇವಲ 70/- ರೂಪಾಯಿ ಎಂದು ನಿಗದಿಪಡಿಸಲಾಗಿದೆ
ಈ ಸೌಲಭ್ಯದಿಂದ ಪಿಂಚಣಿ ಪಡೆಯುತ್ತಿರುವ ಬೀಡಿ ಕಾರ್ಮಿಕರಿಗೆ ಅನುಕೂಲವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 3 ಲಕ್ಷದಷ್ಟು ಮಂದಿ ಪೆÇ್ರವಿಡೆಂಟ್ ಫÀಂಡ್ ಸಂಸ್ಥೆಯಿಂದ ಪಿಂಚಣಿ ಪಡೆಯುವವರಿದ್ಡು ಇವರೆಲ್ಲರೂ ಈ ಸೌಲಭ್ಯ ವನ್ನು ಪಡೆಯಬಹುದಾಗಿದೆ. ಇವರಲ್ಲಿ 1 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಬೀಡಿ ಕಾರ್ಮಿಕರಿದ್ದು, ಇವರೆಲ್ಲರೂ ಜೀವನ್ ಪ್ರಮಾಣ್‍ಗಾಗಿ ದೂರದ ಬ್ಯಾಂಕ್ ಶಾಖೆಗೆ ಅಲೆಯಬೇಕಾಗಿಲ್ಲ. ಅಲ್ಲದೆ ಈ ಎಲ್ಲಾ ಬೀಡಿ ಕಾರ್ಮಿಕರು ತಮ್ಮ ಪಿಂಚಣಿ ಯಾವುದೇ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದ್ದರೂ, ಪಿಂಚಣಿಯನ್ನು ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯ ಮೂಲಕ ತಮ್ಮ ಸಮೀಪದ ಅಂಚೆ ಕಛೇರಿಯಲ್ಲಿ ಅಥವಾ ಪೆÇೀಸ್ಟ್‍ಮ್ಯಾನ್ ಮೂಲಕ ಪಡೆಯಬಹುದು.
ಅದೇ ರೀತಿ ನಿವೃತ್ತ ಸೈನಿಕರಿಗೂ ಇದು ಅನುಕೂಲವಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿರಾರು ನಿವೃತ್ತ ಸೈನಿಕರಿದ್ಡು, ಅವರೆಲ್ಲರೂ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ. ಇತರ ಕೇಂದ್ರ-ರಾಜ್ಯ ಸರಕಾರಿ, ಇಲಾಖೆಗಳ, ಸಂಸ್ಥೆಗಳ ನಿವೃತ್ತ ಉದ್ಯೊಗಿಗಳು ಜೀವನ್ ಪ್ರಮಾಣ್ ವ್ಯವಸ್ಥೆ ಅಳವಡಿಸಿಕೊಂಡಿರುವ ಯಾವುದೇ ಇಲಾಖೆ, ಸಂಸ್ಥೆಯ ಪಿಂಚಣಿದಾರರೂ ಈ ಸೌಲಭ್ಯ ಪಡೆಯಬಹುದಾಗಿದೆ.
ಈ ತಂತ್ರಜ್ಞಾನ ಆಧಾರಿತ ಸೌಲಭ್ಯವನ್ನು ಎಲ್ಲಾ ಪಿಂಚಣಿದಾರರು ಪಡೆಯಬಹುದಾಗಿದ್ದು, ಜೀವನ್ ಪ್ರಮಾಣ್ ಸಲ್ಲಿಕೆ ಸಾಮಾಜಿಕ ಭದ್ರತಾ ಪಿಂಚಣಿದಾರರಿಗೆ ಅಂದರೆ ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ, ಅಂಗವಿಕಲ ಪಿಂಚಣಿ ಇತ್ಯಾದಿಗಳಿಗೆ ಅನ್ವಯಿಸುವುದಿಲ್ಲ ಎಂದು ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment