ಬಂಟ್ವಾಳ, ನವೆಂಬರ್ 14, 2021 (ಕರಾವಳಿ ಟೈಮ್ಸ್) : ತಾಲೂಕಿನ ಪಂಜಿಕಲ್ಲು ಗ್ರಾಮದ ಎನಿಲಕೋಡಿ ನಿವಾಸಿ, ಪ್ರಗತಿಪರ ಕೃಷಿಕ ನಾರಾಯಣ ಬಂಗೇರ ಅವರ ಪಂಪ್ ಶೆಡ್ಡಿಗೆ ಶನಿವಾರ ಸಂಜೆ ಸಿಡಿಲು ಬಡಿದು ಅಡಿಕೆ, ತೆಂಗಿನ ಕಾಯಿ ಸಹಿತ ಹಲವು ಸಾಮಾಗ್ರಿಗಳು ಸುಟ್ಟು ಕರಕಲಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ನಾರಾಯಣ ಬಂಗೇರ ಅರ ಮನೆ ಮತ್ತು ಅಡಿಕೆ ತೋಟದ ಮಧ್ಯೆ ಇರುವ ಪಂಪ್ ಶೆಡ್ಡಿಗೆ ಶನಿವಾರ ರಾತ್ರಿ ಸುಮಾರು 8 ಗಂಟೆ ವೇಳೆಗೆ ಈ ಸಿಡಿಲಾಘಾತ ಸಂಭವಿಸಿದೆ. ಸಿಡಿಲಾಘಾತಕ್ಕೆ ಶೆಡ್ಡಿನ ಛಾವಣಿ ಸಂಪೂರ್ಣ ಸುಟ್ಟು ಕುಸಿದು ಬಿದ್ದಿದ್ದು, ಶೆಡ್ ಒಳಗೆ ಸಂಗ್ರಹಿಸಿಟ್ಟಿದ್ದ ಒಣ ಅಡಿಕೆ, ತೆಂಗಿನಕಾಯಿ, ಸಹಿತ ಕೊಳವೆ ಬಾವಿ ಪಂಪ್, ಅಡಿಕೆ ಕಸಿಯುವ ಯಂತ್ರ, ಹುಲ್ಲು ಕಟಾವು ಯಂತ್ರ, ಪೀಠೋಪಕರಣಕ್ಕಾಗಿ ಸಂಗ್ರಹಿಸಿಟ್ಟ ಮರದ ತುಂಡುಗಳು ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಸ್ಥಳೀಯರ ಮಾಹಿತಿ ಮೇರೆಗೆ ತಕ್ಷಣ ಸ್ಥಳಕ್ಕೆ ದೌಡಾಯಿಸಿ ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಅಡಿಕೆ ಹಾಗೂ ತೆಂಗಿನ ತೋಟಕ್ಕೆ ಬೆಂಕಿಯ ತೀವ್ರತೆ ಹರಡುವುದನ್ನು ತಪ್ಪಿಸಿದ್ದಾರೆ.
0 comments:
Post a Comment