ಬಂಟ್ವಾಳ, ನವೆಂಬರ್ 16, 2021 (ಕರಾವಳಿ ಟೈಮ್ಸ್) : ನಲ್ಕೆಮಾರ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಂದಲೇ ರಚಿತವಾದ ಮಾಸಪತ್ರಿಕೆ ಅಭ್ಯುದಯ ಪತ್ರಿಕೆ ಸೋಮವಾರ ಬಿಡುಗಡೆಗೊಂಡಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪತ್ರಕರ್ತ ಮೌನೇಶ್ ವಿಶ್ವಕರ್ಮ ಮಾತನಾಡಿ, ಶಾಲೆಯ ಮತ್ತು ಮಕ್ಕಳ ಏಳಿಗೆಗಾಗಿ ಅಭ್ಯುದಯ ಪತ್ರಿಕೆ ಲೋಕಾರ್ಪಣೆಗೊಂಡಿದೆ. ಮಕ್ಕಳ ಕಾಲಾವಧಿಯಲ್ಲಿ ಮನಸ್ಸಿಗೆ ತೋಚಿದ್ದನ್ನು ಅಕ್ಷರ ರೂಪದಲ್ಲಿ ಬರೆಯಬೇಕು. ಜೀವವಿಲ್ಲದ ವಸ್ತುಗಳು ಕೂಡಾ ಜೀವಂತವಾಗಿದೆ ಎಂದು ಕಲ್ಪಿಸಿ ಬರೆಯಲು ಆಭ್ಯಾಸ ಮಾಡಬೇಕೆಂದು ತಿಳಿಸಿದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ವಿಜಯ್ ಕುಮಾರ್ ಮಾತನಾಡಿ ಅಭ್ಯುದಯ ಪತ್ರಿಕೆಯಿಂದ ಶಾಲೆಯಲ್ಲಿ ಆಗುವ ಚಟುವಟಿಕೆಗಳನ್ನು ಗ್ರಾಮ ಹಾಗೂ ತಾಲೂಕಿನ ಪ್ರತಿ ಮನೆಗೂ ತಿಳಿಸಲಾಗುವುದು ಎಂದರು.
ಶಾಲಾ ನಾಯಕಿ ತ್ರಿವೇಣಿ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಮುಖ್ಯೋಪಾಧ್ಯಾಯಿನಿ ಜ್ಯೋತಿ, ಶಾಲೆ ಸ್ಥಳದಾನಿ ರಾಮಪ್ಪ, ವಿದ್ಯಾರ್ಥಿಗಳ ಅಭಿವೃದ್ಧಿ ಸಂಘದ ಅಧ್ಯಕ್ಷ ಯೋಗೀಶ, ಶಾಲಾಭಿವೃದ್ಧಿ ಸಮಿತಿ ಸದಸ್ಯ ಯಾದವ ಅಗ್ರಬೈಲು, ಶಿಕ್ಷಕರಾದ ಶಶಿಕಲಾ, ಮಮತಾ, ಜಗನ್ನಾಥ ಮೊದಲಾದವರು ಉಪಸ್ಥಿತರಿದ್ದರು. ಶಿಕ್ಷಕರಾದ ಸೌಮ್ಯ ಪ್ರಾರ್ಥಿಸಿ, ಮೋಹಿನಿ ವಂದಿಸಿದರು. ರೇಖಾ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment