ಬಂಟ್ವಾಳ, ನವೆಂಬರ್ 27, 2021 (ಕರಾವಳಿ ಟೈಮ್ಸ್) : ಉಸ್ತಾದುಲ್ ಅಸಾತೀದ್ ಶೈಖುನಾ ಮರ್‍ಹೂಂ ಮಿತ್ತಬೈಲು ಜಬ್ಬಾರ್ ಉಸ್ತಾದ್ (ಖ.ಸಿ) ಅವರ 3ನೇ ಆಂಡ್ ನೇರ್ಚೆ ಹಾಗೂ ಬೃಹತ್ ಮೌಲಿದ್ ಮಜ್ಲಿಸ್ ಡಿಸೆಂಬರ್ 7 ರಂದು ಮಂಗಳವಾರ ಮಿತ್ತಬೈಲು ನಕ್ಷಬಂಧೀ ನಗರದ ಮಿತ್ತಬೈಲು ಉಸ್ತಾದ್ ಹೌಸ್ ಇಲ್ಲಿ ನಡೆಯಲಿದೆ.
ಸುಬ್‍ಹಿ ನಮಝ್ ಬಳಿಕ ಖತಮುಲ್ ಕುರ್‍ಆನ್ ಹಾಗೂ ಕೂಟು ಝಿಯಾರತ್, ಬೆಳಿಗ್ಗೆ 10.30ಕ್ಕೆ ಹಖೀಕತ್ ಮಾಲ, ಲುಹ್ರ್ ನಮಾಝ್ ಬಳಿಕ ಮೌಲಿದ್ ಮಜ್ಲಿಸ್ ಬಳಿಕ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೂ ಸ್ತ್ರೀಯರಿಗೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಶೈಖುನಾ ಮಿತ್ತಬೈಲ್ ಉಸ್ತಾದ್ ಅವರ ಪುತ್ರ ಇರ್ಶಾದ್ ದಾರಿಮಿ ಅಲ್-ಜಝರಿ ಅವರು ತಿಳಿಸಿದ್ದಾರೆ.
0 comments:
Post a Comment