ಬಂಟ್ವಾಳ, ನವೆಂಬರ್ 01, 2021 (ಕರಾವಳಿ ಟೈಮ್ಸ್) : ತಾಲೂಕಿನ ಮೆಲ್ಕಾರ್ ಸಮೀಪದ ಬೋಳಂಗಡಿಯ ಟ್ರಾಫಿಕ್ ಪೊಲೀಸ್ ಠಾಣಾ ಮುಂಭಾಗ ಹೆದ್ದಾರಿಯಲ್ಲಿ ಭಾನುವಾರ ತಡ ರಾತ್ರಿ 11 ಗಂಟೆ ವೇಳೆಗೆ ಟ್ರೈಲರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಇರಾ ಗ್ರಾಮದ ಪಂಜಾಜೆ ನಿವಾಸಿ ತಿಲಕ್ ರಾಜ್ (29) ಅವರು ಮೃತಪಟ್ಟಿದ್ದಾರೆ.
ತಿಲಕ್ ರಾಜ್ ಕಲ್ಲಡ್ಕ ಕಡೆಯಿಂದ ತನ್ನ ಬೈಕಿನಲ್ಲಿ ಬರುತ್ತಿದ್ದ ವೇಳೆ ಬೋಳಂಗಡಿ ಟ್ರಾಫಿಕ್ ಠಾಣೆಯ ಮುಂಭಾಗ ಹೆದ್ದಾರಿಯಲ್ಲಿ ಹಮೀದ್ ಅನ್ಸಾರಿ ಅವರು ಚಲಾಯಿಸಿಕೊಂಡು ಬಂದ ಟ್ರೈಲರ್ ಲಾರಿ ಡಿಕ್ಕಿ ಹೊಡೆದು ಈ ಅವಘಡಸಂಭವಿಸಿದೆ. ಅಪಘಾತದ ತೀವ್ರತೆಗೆ ಗಂಭೀರ ಗಾಯಗೊಂಡ ತಿಲಕನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕಲ್ಲಡ್ಕ-ಮಾಣಿಮಜಲು ನಿವಾಸಿ ಕೆ ಪಿ ಮುಹಮ್ಮದ್ ಅವರು ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment