ಬಂಟ್ವಾಳ, ನವೆಂಬರ್ 17, 2021 (ಕರಾವಳಿ ಟೈಮ್ಸ್) : ತಾಲೂಕಿನ ಬರಿಮಾರು ಗ್ರಾಮದ ಮಧುಗಿರಿ ನಿವಾಸಿ ದಿವ್ಯಾ ಅವರ ಹಿರಿಯ ಪುತ್ರಿ ಜ್ಯೋತಿ (28) ನವೆಂಬರ್ 17ರ ಬೆಳಿಗ್ಗೆ 10 ಗಂಟೆಗೆ ಮನೆಗೆ ಸಾಮಾಗ್ರಿ ತರಲೆಂದು ತಿಳಿಸಿ ತೆರಳಿದಾಕೆ ವಾಪಾಸು ಬರದೆ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬುಧವಾರ ಬೆಳಿಗ್ಗೆ 100 ರೂಪಾಯಿ ಪಡೆದುಕೊಂಡು ಸಾಮಾನು ತರುವುದಾಗಿ ತಾಯಿಯಲ್ಲಿ ತಿಳಿಸಿ ತೆರಳಿದಾಕೆ ಸಂಜೆವರೆಗೂ ಮನೆಗೆ ವಾಪಾಸು ಬಂದಿಲ್ಲ. ಆಕೆಯ ಮೊಬೈಲ್ ಸಂಖ್ಯೆ ಕೂಡಾ ಸ್ವಿಚ್ ಆಫ್ ಆಗಿದೆ. ಈಕೆಯನ್ನು ಪರಿಸರದ ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗದೇ ಕಾಣೆಯಾಗಿರುತ್ತಾಳೆ ಎಂದು ತಾಯಿ ದಿವ್ಯಾ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅಪರಾಧ ಕ್ರಮಾಂಕ 148/2021 ರಂತೆ ಪ್ರಕರಣ ದಾಖಲಾಗಿರುತ್ತದೆ
0 comments:
Post a Comment