ಮಂಗಳೂರು, ನವೆಂಬರ್ 04, 2021 (ಕರಾವಳಿ ಟೈಮ್ಸ್) : ಮೈಸೂರು ವಿಶ್ವವಿದ್ಯಾನಿಲಯ ವತಿಯಿಂದ ಮೈಸೂರಿನಲ್ಲಿ ನಡೆದ ಪ್ರಥಮ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್‍ಶಿಪ್-2021 ಸ್ಪರ್ಧೆಯ ಪಾಯಿಂಟ್ ಫೈಟ್ ಮತ್ತು ಕಿಕ್ ಲೈಟ್ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು-ಗುರುಪುರದ ಜಿ. ಆದಿತ್ಯ ಕಿರಣ್ ಎರಡು ಚಿನ್ನದ ಪದಕ ಗಳಿಸಿದ್ದಾರೆ.
ನೀರುಮಾರ್ಗ ಪಾಲ್ದನೆ ಕ್ಯಾಂಬ್ರಿಡ್ಜ್ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿರುವ ಈತ ಮಂಗಳೂರು ಇನ್‍ಸ್ಟಿಟ್ಯೂಟ್ ಆಫ್ ಐಕೆಎಂಎ (ಕರಾಟೆ ಮತ್ತು ಮಾರ್ಶಲ್ ಆಟ್ರ್ಸ್) ಸಂಸ್ಥೆಯಲ್ಲಿ ನಿತಿನ್ ಎನ್. ಸುವರ್ಣ ಮತ್ತು ಸಂಪತ್ ಕುಮಾರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.
ಕರಾಟೆ, ಕಿಕ್ ಬಾಕ್ಸಿಂಗ್, ಬಾಕ್ಸಿಂಗ್, ಡಬ್ಲ್ಯೂಯುಎಸ್‍ಎಚ್‍ಯುನಲ್ಲಿ ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದು, ಹಲವು ಪ್ರಶಸ್ತಿ ಗಳಿಸಿರುವ ಈತ ಗುರುಪುರ ನಿವಾಸಿ ಕಿರಣ್ ಕುಮಾರ್-ಸಿ.ಎಸ್. ಲೀಲಾವತಿ ದಂಪತಿಯ ಪುತ್ರ.
0 comments:
Post a Comment