ನಂದಾವರ : ಎಸ್ಸೆಸ್ಸೆಫ್-ಎಸ್.ವೈ.ಎಸ್. ವತಿಯಿಂದ ಪದ್ಮಶ್ರೀ ಹರೇಕಳ ಹಾಜಬ್ಬಗೆ ಸನ್ಮಾನ - Karavali Times ನಂದಾವರ : ಎಸ್ಸೆಸ್ಸೆಫ್-ಎಸ್.ವೈ.ಎಸ್. ವತಿಯಿಂದ ಪದ್ಮಶ್ರೀ ಹರೇಕಳ ಹಾಜಬ್ಬಗೆ ಸನ್ಮಾನ - Karavali Times

728x90

20 November 2021

ನಂದಾವರ : ಎಸ್ಸೆಸ್ಸೆಫ್-ಎಸ್.ವೈ.ಎಸ್. ವತಿಯಿಂದ ಪದ್ಮಶ್ರೀ ಹರೇಕಳ ಹಾಜಬ್ಬಗೆ ಸನ್ಮಾನ

ಬಂಟ್ವಾಳ, ನವೆಂಬರ್ 20, 2021 (ಕರಾವಳಿ ಟೈಮ್ಸ್) : ಇತ್ತೀಚೆಗೆ ನವದೆಹಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಮಾನಾಥ ಕೋವಿಂದ್ ಅವರಿಂದ ಪದ್ಮಶ್ರೀ ಪ್ರಶಸ್ತಿ ಪಡೆದ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ನಂದಾವರ ತಾಜುಲ್ ಉಲಮಾ ಕಲ್ಚರಲ್ ಸೆಂಟರ್, ಎಸ್ಸೆಸ್ಸೆಫ್-ಎಸ್.ವೈ.ಎಸ್. ವತಿಯಿಂದ ಸಂಸ್ಥೆಯ ಕಛೇರಿಯಲ್ಲಿ ಇತ್ತೀಚೆಗೆ ಸನ್ಮಾನಿಸಿ ಗೌರವಿಸಲಾಯಿತು. 

ಇದೇ ಹಾಜಬ್ಬ ಅವರು ಸನ್ಮಾನ ಸ್ವೀಕರಿಸಿ ಅನಿಸಿಕೆ ವ್ಯಕ್ತಪಡಿಸಿದರು. ತಾಜುಲ್ ಉಲಮಾ ಕಲ್ಚರಲ್ ಸೆಂಟರ್ ಅಧ್ಯಕ್ಷ ನಝೀರ್ ಮುಸ್ಲಿಯಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಎಸ್ಸೆಸ್ಸೆಫ್ ಪ್ರಮುಖರಾದ ಉಸ್ಮಾನ್ ಮಲಿಕ್, ಅಕ್ಬರಲಿ ಮದನಿ ಸಹಿತ ಸಾರ್ವಜನಿಕರು ಭಾಗವಹಿಸಿದ್ದರು.

  • Blogger Comments
  • Facebook Comments

0 comments:

Post a Comment

Item Reviewed: ನಂದಾವರ : ಎಸ್ಸೆಸ್ಸೆಫ್-ಎಸ್.ವೈ.ಎಸ್. ವತಿಯಿಂದ ಪದ್ಮಶ್ರೀ ಹರೇಕಳ ಹಾಜಬ್ಬಗೆ ಸನ್ಮಾನ Rating: 5 Reviewed By: karavali Times
Scroll to Top