ಮೈಸೂರು, ನವೆಂಬರ್ 20, 2021 (ಕರಾವಳಿ ಟೈಮ್ಸ್) : ಪವಿತ್ರ ಇಸ್ಲಾಮಿನ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಅವರನ್ನು ನಿಂದಿಸಿದ ಶಿಯಾ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ವಾಸಿಂ ರಿಝ್ವಿ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದಾರುಲ್ ಉಲೂಂ ಹಝ್ರತ್ ಟಿಪ್ಪು ಸುಲ್ತಾನ್ ಫೈಜಾನೆ ಗರೀಬುನ್ನವಾಝ್ ಅಧ್ಯಕ್ಷ ಖ್ವಾಜಾ ಅಝೀಂ ಅಲಿ ಶಾ ಚಿಶ್ತಿ ಅವರು ಮೈಸೂರು-ಉದಯಗಿರಿ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಅವರಿಗೆ ಲಿಖಿತ ದೂರು ನೀಡಿ ಆಗ್ರಹಿಸಿದ್ದಾರೆ.
ರಿಝ್ವಿ ಇತ್ತೀಚೆಗೆ ಹಿಂದಿಯಲ್ಲಿ ಬರೆದ ಪುಸ್ತಕದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಅವರನ್ನು ನಿಂದಿಸಿದ್ದಲ್ಲದೆ ಪವಿತ್ರ ಇಸ್ಲಾಂ ಧರ್ಮ, ಅದರ ಅನುಯಾಯಿಗಳ ವಿರುದ್ದ ಆಕ್ಷೇಪಾರ್ಹ ಭಾಷೆ ಬಳಸಿರುತ್ತಾರೆ. ಇವರ ಪುಸ್ತಕದ ವಿಷಯಗಳು ಮತ್ತು ಆಕ್ಷೇಪಾರ್ಹ ಹೇಳಿಕೆಗಳು ಪ್ರವಾದಿ ಮುಹಮ್ಮದ್ ಮುಸ್ತಫಾ ಸ್ವಲ್ಲಲ್ಲಾಹು ಅಲೈಹಿವಸಲ್ಲಂ ಅವರನ್ನು ಅನುಸರಿಸುವ ಮತ್ತು ಇಸ್ಲಾಮಿಕ್ ತತ್ವಗಳನ್ನು ಅನುಸರಿಸುವವರ ಧಾರ್ಮಿಕ ಭಾವನೆಗಳನ್ನು ಆಕ್ರೋಶಗೊಳಿಸುವ ಉದ್ದೇಶ ಹೊಂದಲಾಗಿದೆ. ವರ ಹೇಳಿಕೆಗಳು ಭಾರತದ ಮುಸ್ಲಿಮರ ವಿರುದ್ಧ ದ್ವೇಷದ ಭಾವನೆಯನ್ನು ಉಂಟುಮಾಡುವ ಗುರಿಯನ್ನು ಹೊಂದಿವೆ, ಇದು ಶಾಂತಿ ಭಂಗಕ್ಕೆ ಬೆದರಿಕೆಯೊಡ್ಡುವ ಸಾಧ್ಯತೆಯಿದೆ.
ಈ ಹಿನ್ನಲೆಯಲ್ಲಿ ಅವರ ವಿರುದ್ದ ಭಾರತೀಯ ದಂಡನೆಯ ಸೆಕ್ಷನ್ 153ಎ, 1538, 295ಎ, 504 ಹಾಗೂ 505 (1)(ಸಿ) ಅನುಸಾರ ವಾಸಿಂ ರಿಝ್ವಿ ಹಾಗೂ ಅವರ ಸಹಚರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ನೀಡಿದ ಲಿಖಿತ ದೂರಿನಲ್ಲಿ ಆಗ್ರಹಿಸಿದ್ದಾರೆ.
0 comments:
Post a Comment