ಭೂಸುಧಾರಣಾ ಕಾಯ್ದೆಯಿಂದ ಭೂಮಿ ಪಡೆದರು ಭೂಮಾಲಕರ ಪರವಾಗಿದ್ದ ಆರೆಸ್ಸೆಸ್-ಬಿಜೆಪಿ ಜೊತೆ ಕೈಜೋಡಿಸಿರುವುದು ನಾಚಿಕೆಗೇಡು : ವಸಂತ ಆಚಾರಿ ಕಿಡಿ - Karavali Times ಭೂಸುಧಾರಣಾ ಕಾಯ್ದೆಯಿಂದ ಭೂಮಿ ಪಡೆದರು ಭೂಮಾಲಕರ ಪರವಾಗಿದ್ದ ಆರೆಸ್ಸೆಸ್-ಬಿಜೆಪಿ ಜೊತೆ ಕೈಜೋಡಿಸಿರುವುದು ನಾಚಿಕೆಗೇಡು : ವಸಂತ ಆಚಾರಿ ಕಿಡಿ - Karavali Times

728x90

15 November 2021

ಭೂಸುಧಾರಣಾ ಕಾಯ್ದೆಯಿಂದ ಭೂಮಿ ಪಡೆದರು ಭೂಮಾಲಕರ ಪರವಾಗಿದ್ದ ಆರೆಸ್ಸೆಸ್-ಬಿಜೆಪಿ ಜೊತೆ ಕೈಜೋಡಿಸಿರುವುದು ನಾಚಿಕೆಗೇಡು : ವಸಂತ ಆಚಾರಿ ಕಿಡಿ

ಬಂಟ್ವಾಳ, ನವೆಂಬರ್ 16, 2021 (ಕರಾವಳಿ ಟೈಮ್ಸ್) : ಇಂದು ನಮ್ಮನ್ನಾಳುತ್ತಿರುವ ಸರಕಾರಗಳು ಕಾರ್ಮಿಕ ವಿರೋಧಿಯಾಗಿದ್ದು, ಕಾರ್ಮಿಕರು  ಹಲವು ಹೋರಾಟಗಳನ್ನು ನಡೆಸಿ ಪಡೆದುಕೊಂಡ ಹಕ್ಕುಗಳನ್ನು ಇಂದು ಕೇಂದ್ರ ಸರಕಾರವು ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಮೂಲಕ  ಕಾರ್ಮಿಕ ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರಲ್ಲದೆ ಸಾರ್ವಜನಿಕ ರಂಗದ ಎಲ್ಲಾ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವ ಮೂಲಕ ಕೇಂದ್ರ ಸರಕಾರವು ಬಂಡವಾಳ ಶಾಹಿಗಳ ಹಿತ ಕಾಯುತ್ತಿದೆ ಎಂದು ಸಿಪಿಐ(ಎಂ) ದ ಕ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ ಆಕ್ರೋಶ ವ್ಯಕ್ತಪಡಿಸಿದರು. 

ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ) ಇದರ 23ನೇ ಬಂಟ್ವಾಳ ತಾಲೂಕು ಸಮ್ಮೇಳನದ ಅಂಗವಾಗಿ ಬಿ ಸಿ ರೋಡಿನ ಮಿನಿ ವಿಧಾನಸೌಧದ ಮುಂಭಾಗ ನಡೆದ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು  ಬಿಸಿಯೂಟ ನೌಕರರಿಗೆ ವೇತನವನ್ನು ನೀಡದೆ ಸರಕಾರವು  ವಂಚಿಸುತ್ತಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯನ್ನು ದುರ್ಬಲಗೊಳಿಸಿ ಕೋಟ್ಯಾಂತರ ರೂಪಾಯಿಯನ್ನು ಲಪಟಾಯಿಸಲಾಗಿದೆ ಎಂದು ಆರೋಪಿಸಿದ ಅವರು ಭೂ ಸುಧಾರಣೆ ಕಾನೂನು ಜಾರಿಯಾಗಲು ಕಮ್ಯೂನಿಸ್ಟರ ನೇತೃತ್ವದಲ್ಲಿ  ಗೇಣಿದಾರರ  ಪ್ರಬಲ ಹೋರಾಟ ಅಂದು ಬಂಟ್ವಾಳದಲ್ಲಿಯೇ ಆರಂಭಗೊಂಡಿದ್ದು, ಕಮ್ಯೂನಿಸ್ಟರ ನಿರಂತರ ಹೋರಾಟದಿಂದ ಭೂ ಸುಧಾರಣಾ ಕಾಯ್ದೆ ಜಾರಿಯಾಗಿದೆ.  ಭೂ ಸುಧಾರಣಾ ಕಾಯ್ದೆಯಿಂದ  ಭೂಮಿ ಪಡೆದವರು ಈಗ ಅಂದಿನ ಕಾಲದಲ್ಲಿ ಭೂ ಮಾಲಕರ ಪರವಾಗಿದ್ದ ಆರೆಸ್ಸೆಸ್-ಬಿಜೆಪಿಯೊಂದಿಗೆ ಕೈಜೋಡಿಸಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ದುಡಿಯುವ ಜನರು ಇತಿಹಾಸವನ್ನು ಅರ್ಥಮಾಡಿಕೊಂಡು ಸಂಘ ಪರಿವಾರದಿಂದ ಈ ದೇಶವನ್ನು ಪಾರು ಮಾಡಲು ಹೋರಾಟಕ್ಕೆ ಕೈಜೋಡಿಸಬೇಕೆಂದು ಕರೆ ನೀಡಿದರು. 

ಸಭೆಯಲ್ಲಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ ಬಾಲಕೃಷ್ಣ  ಶೆಟ್ಟಿ ಸ್ವಾಗತಿಸಿ, ಸಿಪಿಐ(ಎಂ) ತಾಲೂಕು ಸಮಿತಿ ಸದಸ್ಯ ಉದಯ ಕುಮಾರ್ ಬಂಟ್ವಾಳ ವಂದಿಸಿದರು. 

ಸಭೆಗೂ ಮುನ್ನ ಬಿ ಸಿ ರೋಡಿನ ಸೋಮಸುಂದರ ರಾವ್ ಕಂಪೌಂಡಿನಲ್ಲಿ ಸಮ್ಮೇಳನದ ಅಧಿವೇಶನ ನಡೆಯಿತು. ಪಕ್ಷದ ಹಿರಿಯ ಸದಸ್ಯ ಶಿವರಾಯಪ್ರಭು  ಧ್ವಜರೋಹಣಗೈದರು. ಜೆ ಬಾಲಕೃಷ್ಣ ಶೆಟ್ಟಿ ಉದ್ಘಾಟಿಸಿದರು, ಸ್ವಾಗತ ಸಮಿತಿ ಗೌರವಾಧ್ಯಕ್ಷ ರಾಜಾ ಚೆಂಡ್ತಿಮಾರ್, ಅಧ್ಯಕ್ಷ ಉದಯಕುಮಾರ್ ಬಂಟ್ವಾಳ, ಹಿರಿಯ ಮುಖಂಡರಾದ  ಬಿ ವಾಸು ಗಟ್ಟಿ, ಸಂಜೀವ ಬಂಗೇರ, ಸ್ವಾಗತ ಸಮಿತಿ ಕೋಶಾಧಿಕಾರಿ ಸುರೇಂದ್ರ ಕೋಟ್ಯಾನ್ ಉಪಸ್ಥಿತರಿದ್ದರು.

ಸಮ್ಮೇಳನದಲ್ಲಿ ಕಾರ್ಯದರ್ಶಿಯಾಗಿ ರಾಮಣ್ಣ ವಿಟ್ಲ ಪುನರಾಯ್ಕೆಯಾದರು. ಸದಸ್ಯರುಗಳಾಗಿ ಉದಯಕುಮಾರ್ ಬಂಟ್ವಾಳ, ದಿನೇಶ್ ಆಚಾರಿ ಮಾಣಿ, ತುಳಸೀದಾಸ್ ವಿಟ್ಲ, ಅಪ್ಪುನಾಯ್ಕ ನೀರಪಾದೆ, ದೇವಪ್ಪ ಗೌಡ ಕನ್ಯಾನ, ಶಿವರಾಯ ಪ್ರಭು, ಲೋಲಾಕ್ಷಿ ಬಂಟ್ವಾಳ ಆಯ್ಕೆಯಾದರು.

  • Blogger Comments
  • Facebook Comments

0 comments:

Post a Comment

Item Reviewed: ಭೂಸುಧಾರಣಾ ಕಾಯ್ದೆಯಿಂದ ಭೂಮಿ ಪಡೆದರು ಭೂಮಾಲಕರ ಪರವಾಗಿದ್ದ ಆರೆಸ್ಸೆಸ್-ಬಿಜೆಪಿ ಜೊತೆ ಕೈಜೋಡಿಸಿರುವುದು ನಾಚಿಕೆಗೇಡು : ವಸಂತ ಆಚಾರಿ ಕಿಡಿ Rating: 5 Reviewed By: karavali Times
Scroll to Top