ಬಂಟ್ವಾಳ, ನವೆಂಬರ್ 14, 2021 (ಕರಾವಳಿ ಟೈಮ್ಸ್) : ತಾಲೂಕಿನ ಮಾಣಿ ಸಮೀಪದ ಬುಡೋಳಿ ಹೆದ್ದಾರಿಯಲ್ಲಿ ಭಾನುವಾರ ಸಾಗುತ್ತಿದ್ದ ಅನಿಲ ಸಾಗಾಟದ ಟ್ಯಾಂಕರ್ ಚಾಲಕನ ನಿಯಂತ್ರಣ ಮೀರಿ ರಸ್ತೆ ಬದಿಯ ಸುಮಾರು 30 ಅಡಿ ಅಳದ ಕಂದಕಕ್ಕೆ ಉರುಳಿ ಬಿದ್ದಿದೆ.
ಬೆಂಗಳೂರು ಕಡೆಯಿಂದ ಅನಿಲ ಖಾಲಿ ಮಾಡಿ ಮಂಗಳೂರು ಕಡೆಗೆ ಬರುತ್ತಿದ್ದ ಟ್ಯಾಂಕರ್ ಬುಡೋಳಿ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡು ಈ ಅವಘಡ ಸಂಭವಿಸಿದೆ. ಅಪಘಾತದಿಂದ ಟ್ಯಾಂಕರಿನೊಳಗೆ ಸಿಲುಕಿಕೊಂಡಿದ್ದ ಚಾಲಕನನ್ನು ಸ್ಥಳೀಯರು ಹರಸಾಹಸಪಟ್ಟು ಹೊರೆಗೆಳೆದು ಪ್ರಾಣ ರಕ್ಷಿಸಿದ್ದಾರೆ.
0 comments:
Post a Comment