ಬೆಳ್ತಂಗಡಿ, ನವೆಂಬರ್ 13, 2021 (ಕರಾವಳಿ ಟೈಮ್ಸ್) : ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದಲ್ಲಿ ಅಕ್ಟೋಬರ್ 31ರಂದು ಇಲ್ಲಿನ ನಿವಾಸಿ ಅಬೂಬಕ್ಕರ್ ಅವರ ಪುತ್ರ ಮುಹಮ್ಮದ್ ಅವರ ಮನೆಗೆ ನುಗ್ಗಿ 12 ಲಕ್ಷಕ್ಕೂ ಅಧಿಕ ಮೌಲ್ಯ 40 ಪವನ್ ಚಿನ್ನಾಭರಣ ಸಹಿತ ನಗದು ಹಣ ಕಳವು ಕೃತ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಶಸ್ವಿ ಕಾರ್ಯಾಚರಣೆ ನಡೆಸಿದ ಬೆಳ್ತಂಗಡಿ ಪೊಲೀಸ್ ಠಾಣಾ ಪಿಎಸ್ಸೈ ನಂದಕುಮಾರ್ ನೇತೃತ್ವದ ಪೊಲೀಸರು 3 ಮಂದಿ ಖದೀಮರನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ನಿರಿಂದಿ ನಿವಾಸಿ ಅಬ್ದುಲ್ ರಹಿಮಾನ್ ಅವರ ಪುತ್ರ ಮುಹಮ್ಮದ್ ಸ್ವಾಲಿ (26), ಲಾಯಿಲ ಗ್ರಾಮದ ಕುಂಟಿನಿ ನಿವಾಸಿ ಅಬ್ಬಾಸ್ ಅವರ ಪುತ್ರ ಯಾಹ್ಯಾ (32) ಹಾಗೂ ನಾವೂರು ಗ್ರಾಮದ ಕಿರ್ನಡ್ಕ ನಿವಾಸಿ ಹುಸೈನ್ ಅವರ ಪುತ್ರ ಬಿ ಎಚ್ ನೌಫಲ್ (27) ಎಂದು ಪೊಲಿಸರು ಹೆಸರಿಸಿದ್ದಾರೆ.
ಬಂಧಿತ ಆರೋಪಿಗಳಿಂದ 1,69,500/- ರೂಪಾಯಿ ಮೌಲ್ಯದ ಸೊತ್ತುಗಳಾದ ಕೃತ್ಯಕ್ಕೆ ಉಪಯೋಗಿಸಿದ ಕೆಎ 21 ಎಂ 8376 ನೋಂದಣಿ ಸಂಖ್ಯೆಯ ಆಲ್ಟೋ ಕಾರು, ಪಲ್ಸರ್ ಎನ್ ಎಸ್ ಮೋಟಾರು ಸೈಕಲ್, ನಾಲ್ಕು ಮೊಬೈಲ್ ಹ್ಯಾಂಡ್ ಸೆಟ್‍ಗಳು, 12,05,200/- ರೂಪಾಯಿ ಮೌಲ್ಯದ 320 ಗ್ರಾಂ ಚಿನ್ನಾಭರಣ ಹಾಗೂ ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 13,75,930 ರೂಪಾಯಿ ಎಂದು ಅಂದಾಜಿಸಲಾಗಿದೆ.
ಇಂದಬೆಟ್ಟು ನಿವಾಸಿ ಮಹಮ್ಮದ್ ಅವರ ಮನೆಯಲ್ಲಿ ಅಕ್ಟೋಬರ್ 31 ರಂದು ಯಾರೂ ಇಲ್ಲದ ಸಮಯ ಮನೆಗೆ ನುಗ್ಗಿದ್ದ ಆರೋಪಿಗಳು ಮನೆಯ ಕಪಾಟಿನಲ್ಲಿದ್ದ 13 ಪವನಿನ ಚಿನ್ನದ ನೆಕ್ಲೀಸ್, ಒಂದು ಪವನ್ ಚಿನ್ನದ ಚೈನ್, ಒಂದು ಪವನ್ ಚಿನ್ನದ ಸಣ್ಣ ಚೈನ್, ಒಂದೂವರೆ ಪವನಿನ ಚಿನ್ನದ ಮಕ್ಕಳ ಚೈನ್ 02, ತಲಾ ಒಂದು ಒಂದು ಪವನಿನ 4 ಚಿನ್ನದ ಕಾಯಿನ್ಸ್, ತಲಾ ನಾಲ್ಕು ಪವನಿನ ಚಿನ್ನದ 4 ಬಿಸ್ಕೆಟ್, ಎರಡು ಪವನಿನ ಚಿನ್ನದ ಗಟ್ಟಿ, ಅರ್ಧ ಪವನಿನ ಚಿನ್ನದ ಬ್ರಾಸ್ ಲೈಟ್, ಅರ್ಧ ಪವನಿನ ಚಿನ್ನದ ತುಂಡಾದ ಬಳೆ ಹಾಗೂ ಪೆಂಡೆಂಟ್, ಅರ್ಧ ಪವನಿನ ಚಿನ್ನದ ಮಗುವಿನ ಕಿವಿ ಓಲೆ ಜೊತೆ ಸಹಿತ ಸುಮಾರು 12,05,200 ರೂಪಾಯಿ ಮೌಲ್ಯದ ವಿವಿಧ ರೀತಿಯ 40 ಪವನ್ ಚಿನ್ನಾಭರಣಗಳು ಮತ್ತು 5200/- ರೂಪಾಯಿ ನಗದು ಹಣ ಕಳವುಗೈದು ಪರಾರಿಯಾಗಿದ್ದರು.
ಈ ಬಗ್ಗೆ ಬೆಳ್ತಂಗಡಿ ಪೆÇಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 95/2021 ಕಲಂ 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿತ್ತು. ಸದ್ರಿ ಪ್ರಕರಣದಲ್ಲಿ ಆರೋಪಿಗಳ ಪತ್ತೆಗಾಗಿ ದ.ಕ ಜಿಲ್ಲಾ ಎಸ್ಪಿ ಸೋನವನ ಋಷಿಕೇಶ್ ಭಗವಾನ್, ಅಡಿಶನಲ್ ಎಸ್ಪಿ ಶಿವಕುಮಾರ್ ಗುಣಾರೆ ಅವರ ನಿರ್ದೇಶನದಂತೆ ಬಂಟ್ವಾಳ ಎಎಸ್ಪಿ ಶಿವಾಂಶು ರಜಪೂತ್ ಅವರ ಸೂಚನೆಯಂತೆ ಪ್ರಕರಣದ ತನಿಖಾಧಿಕಾರಿ ಬೆಳ್ತಂಗಡಿ ಪೊಲೀಸ್ ಸರ್ಕಲ್ ಇನ್ಸ್‍ಪೆಕ್ಟರ್ ಶಿವಕುಮಾರ ಬಿ, ಬೆಳ್ತಂಗಡಿ ಪೆÇಲೀಸ್ ಠಾಣಾ ಪಿಎಸ್ಸೈ ನಂದ ಕುಮಾರ್, ಪೆÇ್ರಬೆಷನರಿ ಪಿಎಸ್ಸೈ ಮೂರ್ತಿ, ಎಎಸೈ ದೇವಪ್ಪ ಎಂಕ, ಸಿಬ್ಬಂದಿಗಳಾದ ಲಾರೆನ್ಸ್, ರಾಜೇಶ್ ಎನ್, ವೃಷಭ, ಪ್ರಮೋದ್ ನಾಯ್ಕ, ಇಬ್ರಾಹಿಂ ಗರ್ಡಾಡಿ, ಲತೀಫ್, ವಿಜಯ ಕುಮಾರ್ ರೈ, ವೆಂಕಟೇಶ್, ಬಸವರಾಜ್, ಚರಣ್, ಅವಿನಾಶ್, ವಾಹನ ಚಾಲಕರಾದ ಮಹಮ್ಮದ್ ಆಸೀಫ್, ಸತೀಶ್, ತಾಂತ್ರಿಕ ಸಿಬ್ಬಂದಿಗಳಾದ ದಿವಾಕರ, ಸಂಪತ್ ಕುಮಾರ್ ಅವರುಗಳು ಆರೋಪಿಗಳ ಪತ್ತೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
0 comments:
Post a Comment