ಬಂಟ್ವಾಳ, ನವೆಂಬರ್ 27, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು ಪೇಟೆಯಲ್ಲಿರುವ ನ್ಯಾಯವಾದಿ ಸುದರ್ಶನ್ ಕುಮಾರ್ ಅವರ ಕಚೇರಿಗೆ ನುಗ್ಗಿದ ಕಳ್ಳರು ನಗದು ಕಳವುಗೈದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಿ ಸಿ ರೋಡು ಪೇಟೆಯ ಶ್ರೀನಿವಾಸ್ ವಾಣಿಜ್ಯ ಸಂಕೀರ್ಣದಲ್ಲಿ 2ನೇ ಮಹಡಿಯಲ್ಲಿರುವ ನ್ಯಾಯವಾದಿ ಎಂ ಸುದರ್ಶನ್ ಕುಮಾರ್ ಅವರ ಕಚೇರಿಗೆ ಗುರುವಾರ ತಡ ರಾತ್ರಿ ನುಗ್ಗಿದ ಕಳ್ಳರು ಕಚೇರಿಯ ಕ್ಯಾಶ್ ಡ್ರಾವರಿನಲ್ಲಿದ್ದ 3 ಸಾವಿರ ರೂಪಾಯಿ ನಗದು ಎಗರಿಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಶುಕ್ರವಾರ ಬೆಳಿಗ್ಗೆ ವಕೀಲರು ಕಚೇರಿಗೆ ಬಂದಾಗ ಕೃತ್ಯ ಬೆಳಕಿಗೆ ಬಂದಿದ್ದು, ಕಳ್ಳರು ಕಛೇರಿಯ ಒಂದು ಭಾಗದ ಶಟರಿನ ಬೀಗವನ್ನು ತುಂಡರಿಸಿ ಕಛೇರಿಯಲ್ಲಿರುವ ಪ್ಯಾಬ್ರಿಕೇಷನ್ ತುಂಡರಿಸಿಒಳಗೆ ನುಗ್ಗಿ ಕೃತ್ಯ ಎಸಗಿದ್ದು ಕಂಡು ಬಂದಿದೆ. ಈ ಬಗ್ಗೆ ವಕೀಲರು ನೀಡಿದ ದೂರಿನಂತೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
0 comments:
Post a Comment