ಬಂಟ್ವಾಳ, ನವೆಂಬರ್ 18, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಿ ಮೂಡ ಗ್ರಾಮದ ಮೊಡಂಕಾಪು ದೀಪಿಕಾ ಪ್ರೌಢಶಾಲಾ ಬಳಿ ಕಬ್ಬು ಜ್ಯೂಸ್ ಮಾರಾಟ ಮಾಡುತ್ತಿದ್ದ ಮಂಗಳೂರು ತಾಲೂಕು ಅಡ್ಡೂರು ಗ್ರಾಮದ ಅನಾಸ್ ಮಂಝಿಲ್ ನಿವಾಸಿ ಅನಾಸ್ ಅವರ ಪಪುತ್ರ ಜೆ ಪಿ ಸಾಬೀರ್ ಅಹ್ಮದ್ 40 ಸಾವಿರ ರೂಪಾಯಿ ಮೌಲ್ಯದ ಕಬ್ಬಿನ ಜ್ಯೂಸ್ ಯಂತ್ರವನ್ನು ಕಳವುಗೈದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನ 11 ರಂದು ಸಂಜೆ 6 ಗಂಟೆಗೆ ವ್ಯಾಪಾರ ಮುಗಿಸಿಕೊಂಡು ಸಾಬೀರ್ ಅಹ್ಮದ್ ಅವರು ಮನೆಗೆ ತೆರಳಿದ್ದು, ನ 13 ರಂದು ಬೆಳಿಗ್ಗೆ 7 ಗಂಟೆಗೆ ಬಂದು ನೋಡಿದಾಗ ಕಬ್ಬಿನ ಜ್ಯೂಸ್ ಯಂತ್ರ ಕಳವಾಗಿರುವುದು ಇವರ ಗಮನಕ್ಕೆ ಬಂದಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 131/2021 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment