ದುಬೈ, ನವೆಂಬರ್ 14, 2021 (ಕರಾವಳಿ ಟೈಮ್ಸ್) : 2021 ರ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯನ್ನು ಆಸ್ಟ್ರೇಲಿಯಾ ಗೆದ್ದುಕೊಳ್ಳುವ ಮೂಲಕ ಚೊಚ್ಚಲ ಬಾರಿ ಟಿ 20 ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ.
ಭಾನುವಾರ ರಾತ್ರಿ ದುಬೈ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕಾಂಗರೂಗಳು ಕಿವಿಗಳನ್ನು ಭರ್ಜರಿ 8 ವಿಕೆಟ್ ಗಳಿಂದ ಮಣಿಸಿ ಟ್ರೋಫಿ ತನ್ನದಾಗಿಸಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ನಾಯಕ ಕೇನ್ ವಿಲಿಯಮ್ಸನ್ ಅವರ ಅರ್ಧಶತಕದ ನೆರವಿನಿಂದ ನಾಲ್ಕು ವಿಕೆಟ್ ನಷ್ಟಕ್ಕೆ ಸವಾಲಿನ 172 ರನ್ ಗಳಿಸಿತು.
ನ್ಯೂಜಿಲೆಂಡ್ ನೀಡಿದ ಕಠಿಣ ಗುರಿ ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡ ಡೇವಿಡ್ ವಾರ್ನರ್ (53) ಮತ್ತು ಮಿಚೆಲ್ ಮಾರ್ಷ್ (77) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇನ್ನೂ ಏಳು ಎಸೆತ ಬಾಕಿ ಇರುವಾಗಲೇ 8 ವಿಕೆಟ್ ಗಳಿಂದ ಗೆದ್ದುಕೊಂಡಿತು. ಈ ಮೂಲಕ ಆಸೀಸ್ ಚೊಚ್ಚಲ ಬಾರಿಗೆ ಟಿ-20 ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ನ್ಯೂಜಿಲೆಂಡ್ ವಿಶ್ವಕಪ್ ಗೆಲ್ಲುವ ಗುರಿ ಕನಸಾಗಿಯೇ ಉಳಿಯಿತು.
0 comments:
Post a Comment