ಮಂಗಳೂರು, ನವೆಂಬರ್ 05, 2021 (ಕರಾವಳಿ ಟೈಮ್ಸ್) : ಮಂಗಳೂರು, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅಲ್ಪಸಂಖ್ಯಾತ ಅಂದರೆ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ ಹಾಗೂ ಪಾರ್ಸಿ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳಿಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದ 2021-22ನೇ ಸಾಲಿನ ಅರಿವು ಯೋಜನೆಯನ್ನು ಪ್ರಾರಂಭಿಸಲಾಗಿದ್ದು ನವೆಂಬರ್ 5 ರಿಂದ ಸಿಇಟಿ ಹಾಗೂ ನೀಟ್ ಪರೀಕ್ಷೆಗೆ ಹಾಜರಾಗಿ ವಿವಿಧ ವೃತ್ತಿಪರ ಕೋರ್ಸುಗಳಿಗೆ ಸೀಟು ಹಂಚಿಕೆ ಪಡೆಯುತ್ತಿರುವ ಫ್ರೆಶ್ ವಿದ್ಯಾರ್ಥಿಗಳು ಕೆಎಂಡಿಸಿ ಅರಿವು ಸಾಲ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ಆನ್ ಮೂಲಕ ಅರ್ಜಿ ಸಲ್ಲಿಸಿ ಬಳಿಕ ದೃಢೀಕೃತ ಹಾರ್ಡ್ ಕಾಪಿಗಳನ್ನು ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಗೆ ಸಲ್ಲಿಸಿದ ಬಳಿಕ ಅರ್ಜಿಗಳ ಪರಿಶೀಲನೆ ನಡೆಸಿ ಅರ್ಹ ಅಭ್ಯರ್ಥಿಗಳಿಗೆ ನೇರವಾಗಿ ಬೋಧನಾ ಶುಲ್ಕವನ್ನು ಕೆಇಎಗೆ ಪಾವತಿಸಲಾಗುತ್ತದೆ.
ಈ ಬಗ್ಗೆ https://kmdc.karnataka.gov.in/info-3/ONLINE+APPLICATION/en ವೆಬ್ಸೈಟ್ ಲಿಂಕ್ ಬಳಸಿ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹೆಲ್ಪ್ ಲೈನ್ ನಂಬರ್ 8277799990 ನ್ನು ಸಂಪರ್ಕಿಸಬಹುದು ಎಂದು ಕೆಎಂಡಿಸಿ ಪ್ರಕಟಣೆ ತಿಳಿಸಿದೆ.
0 comments:
Post a Comment