ಮಂಗಳೂರು, ನವೆಂಬರ್ 22, 2021 (ಕರಾವಳಿ ಟೈಮ್ಸ್) : ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಅಲ್ಪಸಂಖ್ಯಾತ ಅಂದರೆ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್ ಹಾಗೂ ಪಾರ್ಸಿ ವರ್ಗಕ್ಕೆ ಸೇರಿದ ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (ಸಿಇಟಿ-ನೀಟ್) ಆಯ್ಕೆಯಾದ ಎಂಬಿಬಿಎಸ್, ಬಿಡಿಎಸ್, ಬಿಇ, ಬಿಟೆಕ್, ಬ್ಯಾಚುರಲ್ ಆಫ್ ಆರ್ಕಿಟೆಕ್ಚರ್, ಆಯುಷ್ ಮೊದಲಾದ ಕೋರ್ಸ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷದ 2021-22ನೇ ಸಾಲಿನ ಅರಿವು ನವೀಕರಣ ಸಾಲಕ್ಕಾಗಿ ಆನ್ ಲೈನ್ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಥಿಗಳು ಆನ್ ಲೈನ್ ಅರ್ಜಿ ಸಲ್ಲಿಸುವಾಗ ನಿಗಮದಿಂದ ಈ ಹಿಂದೆ ಪಡೆದಿರುವ ಸಾಲದ ಒಟ್ಟು ಮೊತ್ತದ ಶೇ 12 ರಷ್ಟನ್ನು ಆಯಾ ಜಿಲ್ಲಾ ಕಚೇರಿಯಲ್ಲಿ ಪಾವತಿಸರತಕ್ಕದ್ದು. ಬಳಿಕ ನಿಗಮದ ವೆಬ್ ಸೈಟ್ kmdc.karnataka.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ನವೆಂಬರ್ 20 ರಿಂದ ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಡಿಸೆಂಬರ್ 20 ಆನ್ ಲೈನ್ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ. ಆನ್ ಲೈನ್ ಅರ್ಜಿ ಸಲ್ಲಿಸಿದ ಬಳಿಕ ವಿದ್ಯಾರ್ಥಿಗಳು ಇಂಡೆಮ್ನಿಟಿ ಬಾಂಡ್ ಸಹಿತ ಪೂರಕ ದಾಖಲೆಗಳೊಂದಿಗೆ ಡಿಸೆಂಬರ್ 30 ರೊಳಗೆ ಜಿಲ್ಲಾ ವ್ಯವಸ್ಥಾಕರ ಕಚೇರಿಗೆ ಸಲ್ಲಿಸಬೇಕಾಗಿದೆ.
0 comments:
Post a Comment