ಬೆಂಗಳೂರು, ನವೆಂಬರ್ 01, 2021 (ಕರಾವಳಿ ಟೈಮ್ಸ್) : 2021ನೇ ಸಾಲಿಗೆ ಇಂಜಿನಿಯರಿಂಗ್/ ಆರ್ಕಿಟೆಕ್ಟರ್ ಕೋರ್ಸುಗಳ ಪ್ರವೇಶಾತಿಗೆ ಕರಡು ಸೀಟ್ ಮ್ಯಾಟಿಕ್ಸ್ ಅನ್ನು ಸರಕಾರವು ನೀಡಿದ್ದು, ಸದರಿ ಕರಡು ಸೀಟ್ ಮ್ಯಾಟ್ರಿಕ್ಸ್ ಹಾಗೂ ಕೃಷಿ ವಿಜ್ಞಾನ, ವೆಟರಿನರಿ ಮತ್ತು ಫಾರ್ಮಸಿ ಕೋರ್ಸುಗಳ ಸೀಟ್ ಮ್ಯಾಟ್ರಿಕ್ಸ್ ಅನ್ನು ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಮಾಹಿತಿಗಾಗಿ ಪ್ರಕಟಿಸಲಾಗಿರುತ್ತದೆ.
ಇಚ್ಛೆ ಆಯ್ಕೆಗಳನ್ನು ಆದ್ಯತಾ ಕ್ರಮದಲ್ಲಿ ದಾಖಲಿಸಲು ಪ್ರಾಧಿಕಾರದ ವೆಬ್ ಸೈಟಿನಲ್ಲಿ ಪೆÇೀರ್ಟಲ್ ಅನ್ನು ನವೆಂಬರ್ 2 ರ ಸಂಜೆ 4 ಗಂಟೆಯಿಂದ ಪ್ರಾರಂಭಿಸಲಾಗುವುದು. ಸರಕಾರವು ನೀಡುವ ಅಂತಿಮ ಸೀಟ್ ಮ್ಯಾಟ್ರಿಕ್ಸ್ ಅನ್ನು ಆಧರಿಸಿ ಅಭ್ಯರ್ಥಿಗಳು ದಾಖಲಿಸುವ ಇಚ್ಚೆ/ ಆಯ್ಕೆಗಳನ್ನು ಪರಿಗಣಿಸಿ ಹಾಗೂ ಅಭ್ಯರ್ಥಿಗಳ ಮೆರಿಟ್ ಆಧಾರದ ಮೇಲೆ ಮತ್ತು ಸರಕಾರದ ರೋಸ್ಟರ್ ನಿಯಮಾವಳಿಗಳಂತೆ ಅಣುಕು ಸೀಟು ಹಂಚಿಕೆಯನ್ನು ನಡೆಸಿ, ಫಲಿತಾಂಶವನ್ನು ಪ್ರಕಟಿಸಿ ಇಚ್ಛೆ ಆಯ್ಕೆಗಳನ್ನು ಬದಲಾಯಿಸಲು/ ಸೇರಿಸಲು/ ಅಳಿಸಿಕೊಳ್ಳಲು/ ಮಾರ್ಪಡಿಸಿಕೊಳ್ಳಲು ಅಭ್ಯರ್ಥಿಗಳಿಗೆ ಪುನ : ಅವಕಾಶ ನೀಡಲಾಗುವುದು.
ಅಂತಿಮವಾಗಿ ಅಭ್ಯರ್ಥಿಗಳು ದಾಖಲಿಸುವ ಇಚ್ಛೆ/ ಆಯ್ಕೆಗಳನ್ನು ಪರಿಗಣಿಸಿ ಈ ಮೇಲಿನಂತೆ ಕ್ರಮ ವಹಿಸಿ, ಮೊದಲನೆ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಲಾಗುವುದು. ಮೊದಲನೆ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಣೆಯ ನಂತರ ಅಭ್ಯರ್ಥಿಗಳು ಪಾಲಿಸಬೇಕಾದ ಪ್ರಕ್ರಿಯೆಯ ವಿವರಗಳನ್ನು ಪ್ರಾಧಿಕಾರದ ವೆಬ್‍ಸೈಟಿನಲ್ಲಿ ಪ್ರಕಟಿಸಲಾಗುವುದು ಎಂದು ಕೆಇಎ ಪ್ರಕಟಣೆ ತಿಳಿಸಿದೆ.
0 comments:
Post a Comment