ಬಂಟ್ವಾಳ : ಸಂಭ್ರಮದ ಶಾಲಾರಂಭ, ಸಂತೋಷದಿಂದ ಶಾಲೆಯತ್ತ ಹೆಜ್ಜೆ ಹಾಕಿದ ಪುಟಾಣಿಗಳು - Karavali Times ಬಂಟ್ವಾಳ : ಸಂಭ್ರಮದ ಶಾಲಾರಂಭ, ಸಂತೋಷದಿಂದ ಶಾಲೆಯತ್ತ ಹೆಜ್ಜೆ ಹಾಕಿದ ಪುಟಾಣಿಗಳು - Karavali Times

728x90

25 October 2021

ಬಂಟ್ವಾಳ : ಸಂಭ್ರಮದ ಶಾಲಾರಂಭ, ಸಂತೋಷದಿಂದ ಶಾಲೆಯತ್ತ ಹೆಜ್ಜೆ ಹಾಕಿದ ಪುಟಾಣಿಗಳು

ಬಂಟ್ವಾಳ, ಅಕ್ಟೋಬರ್ 25, 2021 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಸೋಮವಾರದಿಂದ ಪ್ರಾಥಮಿಕ ಶಾಲೆಗಳು ಆರಂಭಗೊಂಡಿದ್ದು, ಬರೋಬ್ಬರಿ ಒಂದೂವರೆ ವರ್ಷಕ್ಕೂ ಅಧಿಕ ಸಮಯದ ಬಳಿಕ ಪುಟಾಣಿಗಳು ಶಾಲೆಗಳತ್ತ ಸಂಬ್ರಮದಿಂದ ಹೆಜ್ಜೆ ಇಡುತ್ತಿದ್ದ ದೃಶ್ಯ ಕಂಡು ಬಂತು. 

ತಾಲೂಕಿನ ನಲ್ಕೆಮಾರು ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲಾರಂಭ  ವಿಶಿಷ್ಟವಾಗಿ ನಡೆಸಲಾಯಿತು. 6 ರಿಂದ 8ನೇ ತರಗತಿ ವಿದ್ಯಾರ್ಥಿಗಳೇ ಶಾಲಾಂಭದ ಪೂರ್ವ ತಯಾರಿ ನಡೆಸಿದ್ದರು. ಬ್ಯಾಂಡ್ ವಾದ್ಯಗಳೊಂದಿಗೆ 1 ರಿಂದ 5ನೇ ತರಗತಿವರೆಗಿನ ಮಕ್ಕಳನ್ನು ಮೆರವಣಿಗೆ ಮೂಲಕ ಶಾಲಾ ಸಭಾಂಗಣಕ್ಕೆ ಕರೆ ತರಲಾಯಿತು. ಶಾಲಾಬಿವೃದ್ಧಿ ಸಮಿತಿ ಅಧ್ಯಕ್ಷ ವಿಜಯ್ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಶಾಲಾ ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಹೂ ಹಾಗೂ ಬಲೂನು ನೀಡಿ ಸ್ವಾಗತಿಸಿ ಆರತಿ ಎತ್ತಿ ಕುಂಕುಮ ಹಣೆಗಿಟ್ಟು ಸಭಾಂಗಣದಲ್ಲಿ ಕುಳ್ಳಿರಿಸಿದರು. ಶಿಕ್ಷಕಿ ರೇಖಾ ಮಕ್ಕಳ ಹಾಡು ಹಾಡುವ ಮೂಲಕ ಸಭಾರಂಭ ಆರಂಭವಾಯಿತು. ಅಮ್ಟಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂಚಾಯತ್ ಉಪಾಧ್ಯಕ್ಷ ಸುನಿಲ್ ಕುಮಾರ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ, ಮುಖ್ಯೋಪಾಧ್ಯಾಯಿನಿ ಜ್ಯೋತಿ, ಸ್ಥಳೀಯ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು. ಶಿಕ್ಷಕಿಯರಾದ ಜ್ಯೋತಿ ಸ್ವಾಗತಿಸಿ, ಶಶಿಕಲಾ ವಂದಿಸಿದರು. ರೇಖಾ ರಾವ್ ಕಾರ್ಯಕ್ರಮ ನಿರೂಪಿಸಿದರು.  

  • Blogger Comments
  • Facebook Comments

0 comments:

Post a Comment

Item Reviewed: ಬಂಟ್ವಾಳ : ಸಂಭ್ರಮದ ಶಾಲಾರಂಭ, ಸಂತೋಷದಿಂದ ಶಾಲೆಯತ್ತ ಹೆಜ್ಜೆ ಹಾಕಿದ ಪುಟಾಣಿಗಳು Rating: 5 Reviewed By: karavali Times
Scroll to Top