ಬಂಟ್ವಾಳ, ಅಕ್ಟೋಬರ್ 18, 2021 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಮಳೆ ಹಾನಿ ಪ್ರಕರಣ ಮುಂದುವರಿದಿದೆ. ತಾಲೂಕಿನ ಇರಾ ಗ್ರಾಮದ ನಿವಾಸಿ ವಿಮಲಾ ಮಾರ್ಲ ಅವರ ಮನೆಗೆ ಗುಡ್ಡ ಕುಸಿದು ವ್ಯಾಪಕ ಹಾನಿ ಸಂಭವಿಸಿದೆ. ಮನೆ ಮಂದಿಯನ್ನು ತಾಲೂಕಾಡಳಿತ ಸಂಬಂಧಿಕರ ಮನೆಗೆ ಸುರಕ್ಷಿತವಾಗಿ ಸ್ಥಳಾಂತರಿಸಿದೆ.
ಮಂಚಿ ಗ್ರಾಮದ ಪತ್ತುಮುಡಿ ನಿವಾಸಿ ಸುನಂದಾ ಕೋಂ ಭುಜಂಗ ಆಚಾರಿ ಅವರ ಮನೆ ಹಂಚುಗಳು ಹಾಗೂ ಗೋಡೆ ಮಳೆಗೆ ಹಾನಿಗೊಂಡಿದ್ದು ನಷ್ಟ ಸಂಭವಿಸಿದೆ ಎಂದು ತಾಲೂಕಾಡಳಿತ ಪ್ರಕಟಣೆ ತಿಳಿಸಿದೆ.
0 comments:
Post a Comment