ಬಂಟ್ವಾಳ, ಅಕ್ಟೋಬರ್ 07, 2021 (ಕರಾವಳಿ ಟೈಮ್ಸ್) : ತಾಲೂಕಿನ ಕಳ್ಳಿಗೆ ಗ್ರಾಮದ ಚಂದ್ರಿಗೆ ಮನೆ ನಿವಾಸಿ ಬಾಬು ಕುಲಾಲ್ ಅವರ ಪುತ್ರ ಪ್ರವೀಣ ಅವರ ಮನೆ ಸಮೀಪದ ಶೆಡ್ಡಿನಲ್ಲಿ ನಿಲ್ಲಿಸಿದ್ದ ಜುಪಿಟರ್ ಸ್ಕೂಟರ್ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರವೀಣ್ ಅವರು ಅ 2 ರಂದು ರಾತ್ರಿ 8 ಗಂಟೆ ವೇಳೆಗೆ ಮನೆಯ ಶೆಡ್ಡಿನಲ್ಲಿ ನಿಲ್ಲಿಸಿದ್ದ ಸ್ಕೂಟರ್ ಅ 3 ರ ಬೆಳಿಗ್ಗೆ 8 ಗಂಟೆಗೆ ನೋಡುವಾಗ ಸ್ಕೂಟರ್ ಕಳವಾಗಿರುವುದು ಗಮನಕ್ಕೆ ಬಂದಿದೆ. ಕಳವಾಗಿರುವ ಸ್ಕೂಟರ ಮೊತ್ತ ಸುಮಾರು 40 ಸಾವಿರ ರೂಪಾಯಿಗಳು ಎಂದು ಅಂದಾಜಿಸಲಾಗಿದೆ. ಕಳವಾಗಿರುವ ಸ್ಕೂಟರನ್ನು ಪರಿಸರದ ಎಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನಲೆಯಲ್ಲಿ ತಡವಾಗಿ ಠಾಣೆಗೆ ದೂರು ನೀಡಲಾಗಿದೆ.
ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅಪರಾಧ ಕ್ರಮಾಂಕ 114/2021 ಕಲಂ 379 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment