ಉಪ್ಪಿನಂಗಡಿ, ಅಕ್ಟೋಬರ್ 12, 2021 (ಕರಾವಳಿ ಟೈಮ್ಸ್) : ಉಪ್ಪಿನಂಗಡಿ ಬಸ್ಸು ನಿಲ್ದಾಣದೊಳಕ್ಕೆ ಯಮರೂಪಿಯಾಗಿ ಧಾವಿಸಿ ಬಂದ ಸರಕಾರಿ ಬಸ್ಸು ರಸ್ತೆ ದಾಟುತ್ತಿದ್ದ ತಾಯಿ ಹಾಗೂ ಒಂದು ವರ್ಷದ ಪುಟ್ಟ ಕಂದಮ್ಮನನ್ನು ದಾರುಣವಾಗಿ ಬಲಿ ತೆಗೆದುಕೊಂಡ ಹೃದಯ ವಿದ್ರಾವಕ ಘಟನೆ ಮಂಗಳವಾರ ನಡೆದಿದೆ.
ಮೃತರನ್ನು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ನಿವಾಸಿ ಸಿದ್ದೀಕ್ ಅವರ ಪತ್ನಿ ಶಾಹಿದಾ (25) ಹಾಗೂ ಅವರ 1 ವರ್ಷದ ಪುತ್ರ ಶಾಹೀಲ್ ಎಂದು ಹೆಸರಿಸಲಾಗಿದೆ. ಶಾಹಿದಾ ಗೇರುಕಟ್ಟೆಯ ತಾಯಿ ಮನೆಗೆ ಬಂದು ವಾಪಾಸು ಮಂಗಳವಾರ ಬೆಳಿಗ್ಗೆ ಪುತ್ತೂರಿನ ವೈದ್ಯರ ಬಳಿ ಪುತ್ರನೊಂದಿಗೆ ತೆರಳಲು ಹೋಗುತ್ತಿದ್ದ ವೇಳೆ ಉಪ್ಪಿನಂಗಡಿ ಬಸ್ಸು ನಿಲ್ದಾಣದಲ್ಲಿ ಈ ಅವಘಡ ಸಂಭವಿಸಿದೆ. ಬಸ್ ನಿಲ್ದಾಣಕ್ಕೆ ತಿರುಗುವಲ್ಲೇ ಇರುವ ನಂದಿನಿ ಹಾಲಿನ ಅಂಗಡಿ ಎದುರಿನಿಂದ ಮತ್ತೊಂದು ಬದಿಗೆ ಶಾಹಿದಾ ಮಗುವಿನೊಂದಿಗೆ ದಾಟುತ್ತಿದ್ದ ವೇಳೆ ವೇಗವಾಗಿ ನಿಲ್ದಾಣ ಪ್ರವೇಶಿಸಿ ಯಮರೂಪಿ ಕೆಎಸ್ಸಾರ್‍ಟಿಸಿ ಬಸ್ಸು ಡಿಕ್ಕಿ ಹೊಡೆದ ಪರಿಣಾಮ ತಾಯಿ-ಮಗು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕಾಗಮಿಸಿದ ಉಪ್ಪಿನಂಗಡಿ ಪೆÇಲೀಸರು ಆರೋಪಿ ಬಸ್ಸು ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ಬಸ್ಸು ಚಾಲಕನ ಆವಾಂತರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತÀಡಿಸಿದ್ದಾರೆ.
0 comments:
Post a Comment