ಬೆಂಗಳೂರು, ಅಕ್ಟೋಬರ್ 31, 2021 ( ಕರಾವಳಿ ಟೈಮ್ಸ್) : ಅಕ್ಟೋಬರ್ 31ರವರಗೆ ವಿಸ್ತರಿಸಲಾಗಿದ್ದ ಯುಜಿಸಿಇಟಿ ದಾಖಲಾತಿ ಪರಿಶೀಲನೆ ಅವಧಿಯನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ನವೆಂಬರ್ 2ರವರೆಗೆ ಮತ್ತೊಮ್ಮೆ ವಿಸ್ತರಿಸಿ ಕರ್ನಾಟ ಪರೀಕ್ಷಾ ಪ್ರಾಧಿಕಾರ (ಕೆಇಎ) ಪ್ರಕಟಣೆ ಹೊರಡಿಸಿದೆ.
ಇದುವರೆಗೆ ದಾಖಲಾತಿ ಪರಿಶೀಲನೆಗೆ ಹಾಜರಾಗದೆ ಇರುವ ಅಭ್ಯರ್ಥಿಗಳು ನವೆಂಬರ್ 2 ರಂದು ಯಾವುದೇ ಸಹಾಯಕ ಕೇಂದ್ರಗಳಲ್ಲಿ ಹಾಜರಾಗಿ ದಾಖಲಾತಿ ಪರಿಶೀಲನೆ ನಡೆಸಿಕೊಳ್ಳಬಹುದು. ದಾಖಲೆ ಪರಿಶೀಲನೆ ನಂತರವೇ ಅಭ್ಯರ್ಥಿಗಳು ಸೀಟು ಹಂಚಿಕೆಗೆ ಇಚ್ಛೆ/ ಆಯ್ಕೆಯನ್ನು ನಮೂದಿಸಲು ಅರ್ಹತೆ ಪಡೆಯುತ್ತಾರೆ.
0 comments:
Post a Comment