ಬಂಟ್ವಾಳ, ಅಕ್ಟೋಬರ್ 03, 2021 (ಕರಾವಳಿ ಟೈಮ್ಸ್) : ತಾಲೂಕಿನಾದ್ಯಂತ ಶನಿವಾರ ಸಂಜೆಯಿಂದ ರಾತ್ರಿವರೆಗೆ ಸುರಿದ ಭಾರೀ ಮಳೆ-ಗಾಳಿಗೆ ವಿವಿಧೆಡೆ ಹಾನಿ ಸಂಭವಿಸಿದೆ. ಬಡಗಕಜೆಕಾರು ಗ್ರಾಮದ ರವಿ ಸಾಲ್ಯಾನ್ ಅವರಿಗೆ ಸೇರಿದ ಸುಮಾರು 200 ರಬ್ಬರ್ ಮರಗಳು ಹಾನಿಯಾಗುತ್ತದೆ. ನರಿಕೊಂಬು ಗ್ರಾಮದ ನಾಯಿಲ ನಿವಾಸಿ ನಳಿನಿ ಕೋಂ ಉಮೇಶ ಅವರ ಮನೆಯ ಆವರಣ ಗೋಡೆಗೆ ಸಿಡಿಲು ಬಡಿದು ಹಾನಿಯಾಗಿರುತ್ತದೆ. ಉಳಿ ಗ್ರಾಮದ ಶಿವರಾಮ ದೇವಾಡಿಗ ಬಿನ್ ಕೃಷ್ಣಪ್ಪ ದೇವಾಡಿಗ ಅವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿದೆ.
ಉಳಿ ಗ್ರಾಮದ ಗುಂಡಿ ದೊಟ್ಟು ನಿವಾಸಿ ರುಕ್ಮಿಣಿ ಕೋಂ ಗಂಗಯ್ಯ ನಾಯ್ಕ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿದೆ. ಉಳಿ ಗ್ರಾಮದ ಕಕ್ಯಮನೆ ನಿವಾಸಿ ಶೇಖರ ಪೂಜಾರಿ ಬಿನ್ ತಿಮ್ಮಪ್ಪ ಪೂಜಾರಿ ಅವರ ವಾಸ್ಥವ್ಯದ ಮನೆ ಭಾಗಶಃ ಹಾನಿಯಾಗಿದೆ. ಗುಡ್ಡೆಮೇಲು ಮನೆ ನಿವಾಸಿ ಸೆಫಿಯ ಕೋಂ ಅಬ್ದುಲ್ ರಫೀಕ್ ವಾಸ್ತವದ ಮನೆ ಭಾಗಶಃ ಹಾನಿಯಾಗಿದೆ. ಕಕ್ಯಪದವು ನಿವಾಸಿ ಅಮೀನಾ ಕೋಂ ಮುಹಮ್ಮದ್ ರಫೀಕ್ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿದೆ. ಗುಂಡಿದೊಟ್ಟು ಮನೆ ನಿವಾಸಿ ಲಲಿತಾ ಕೋಂ ಗಣೇಶ ಪೂಜಾರಿ ಅವರ ಮೇಲ್ಛಾವಣಿ ತೀವ್ರ ಹಾನಿಯಾಗಿರುತ್ತದೆ ಎಂದು ತಾಲೂಕು ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment