ಬಂಟ್ವಾಳ, ಅಕ್ಟೋಬರ್ 17, 2021 (ಕರಾವಳಿ ಟೈಮ್ಸ್) : ಕೇರಳ ರಾಜ್ಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಭಾರೀ ಮಳೆ ಉಂಟಾಗಿ ಅಕ್ಷರಶಃ ಜಲಪ್ರವಾಹವೇ ಉಂಟಾಗಿದ್ದು, ಇದರ ಸೈಡ್ ಎಫೆಕ್ಟ್ ಎಂಬಂತೆ ಬಂಟ್ವಾಳ ತಾಲೂಕಿನಾದ್ಯಂತ ಒಂದೆರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮಳೆ ತೀವ್ರತೆಗೆ ಇರಾ ಗ್ರಾಮದ ನಿವಾಸಿ ಯಶೋಧ ಚಂದ್ರಶೇಖರ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಅದೇ ರೀತಿ ಬಡಗಬೆಳ್ಳೂರು ಗ್ರಾಮದ ಸುಂದರ ದೇವಾಡಿಗ ಆವರ ಮನೆಯ ಮುಂಭಾಗದ ಮಣ್ಣು ಕುಸಿದು ಹಾನಿ ಸಂಭವಿಸಿದೆ ಎಂದು ತಾಲೂಕು ಕಚೇರಿ ಪ್ರಾಕೃತಿಕ ವಿಕೋಪ ವಿಭಾಗದ ವಿಷಯ ನಿರ್ವಾಹಕ ವಿಶು ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
17 October 2021
- Blogger Comments
- Facebook Comments
Subscribe to:
Post Comments (Atom)
0 comments:
Post a Comment