ಬಂಟ್ವಾಳ, ಅಕ್ಟೋಬರ್ 13, 2021 (ಕರಾವಳಿ ಟೈಮ್ಸ್) : ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ರಾತ್ರಿ-ಹಗಲೆನ್ನಡೆ ಭಾರೀ ಮಳೆಯಾಗುತ್ತಿದ್ದು, ವಿವಿಧೆಡೆ ವ್ಯಾಪಕ ಮಳೆ ಹಾನಿ ಪ್ರಕರಣಗಳು ವರದಿಯಾಗಿವೆ.
ಸಜಿಪನಡು ಗ್ರಾಮದ ದೇರಾಜೆ ಬರೆ ಮನೆ ನಿವಾಸಿ ಲೀಲಾ ಕೋಂ ಸಂಜೀವ ಪೂಜಾರಿ ಅವರ ಮನೆಯ ಸಮೀಪದ ಗುಡ್ಡೆಯ ಮಣ್ಣು ಜರಿದು ಬಿದ್ದಿದ್ದು ಮನೆಗೆ ಯಾವುದೇ ಹಾನಿ ಆಗಿರುವುದಿಲ್ಲ. ಬಾಳ್ತಿಲ ಗ್ರಾಮದ ಸುದೇಕಾರು ನಿವಾಸಿ ಸೇಸಪ್ಪ ನಾಯ್ಕ್ ಅವರ ಮನೆಯ ಹಿಂಬದಿಯ ಗುಡ್ಡ ಜರಿದು ಬಿದ್ದಿರುತ್ತದೆ. ಅನಂತಾಡಿ ಗ್ರಾಮದ ಬಾಕಿಲ ನಿವಾಸಿ ವಾಣಿ ಕೋಂ ಲಕ್ಷ್ಮಣ ಅವರ ಮನೆಯಂಗಳದ ಕಾಂಕ್ರಿಟ್ ತಡೆಗೋಡೆಯು ಗಾಳಿ ಮಳೆಗೆ ಜರಿದು ಬಿದ್ದಿದ್ದು ಬಾಳೆ ಗಿಡಗಳು ಮುರಿದು ಬಿದ್ದಿರುತ್ತದೆ, ಮನೆಗೆ ಯಾವುದೇ ಹಾನಿಯಾಗಿರುವುದಿಲ್ಲ.
ಕೊಳ್ನಾಡು ಗ್ರಾಮದ ಕಾಡುಮಠ ಮೇಲಿನ ಮನೆಯವರ ಕಾಂಪೌಂಡ್ ಕುಸಿದು ಚಿತ್ರಾವತಿ ಕೋಂ ಕೃಷ್ಣಪ್ಪ ಅವರ ವಾಸ್ತವ್ಯದ ಕಚ್ಚಾ ಮನೆಗೆ ತೀವ್ರ ಹಾನಿಯಾಗಿರುತ್ತದೆ. ಅದೃಷ್ಟವಶಾತ್ ಮನೆಯ ಸದಸ್ಯರಿಗೆ ಯಾವುದೇ ಪ್ರಾಣ ಹಾನಿಯಾಗಿರುವುದಿಲ್ಲ. ಮನೆಯ ಸದಸ್ಯರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ. ಕುಟುಂಬದ ಯಜಮಾನ ಭೀನ್ನಚೇತನ ವ್ಯಕ್ತಿಯಾಗಿರುತ್ತಾರೆ. ಸರಪಾಡಿ ಗ್ರಾಮದ ಉಜಿರಾಡಿ ನಿವಾಸಿ ಐತಪ್ಪ ಪೂಜಾರಿ ಅವರ ವಾಸದ ಮನೆಯ ಬದಿಯಲ್ಲಿರುವ ತಡೆಗೋಡೆ ಮಳೆಗೆ ಜರಿದು ಬಿದ್ದಿರುತ್ತದೆ. ಕರಿಯಂಗಳ ಗ್ರಾಮದ ರಂಜಿತ್ ಶೆಟ್ಟಿ ಅವರ ನಿರ್ಮಾಣ ಹಂತದ ಮನೆ ಕುಸಿದು ಸಂಪೂರ್ಣ ಹಾನಿಯಾಗಿರತ್ತದೆ.
ಸಜಿಪಮೂಡ ಗ್ರಾಮದ ಗುರುಮಂದಿರ ನಿವಾಸಿ ಶಬೀರ್ ಅವರ ತಡೆಗೋಡೆ ಕುಸಿದು ರವಿ ಬಿನ್ ನಾರಾಯಣ ಅವರ ಮನೆಗೆ ಕುಸಿದಿದ್ದು ತಗಡು ಶೀಟುಗಳು ಹಾನಿಗೊಂಡಿದೆ. ಅರಳ ಗ್ರಾಮದ ಸುಂದರ ಬಿನ್ ದೂಜ ಅವರ ಮನೆಯ ಮೇಲೆ ಕಂಪೌಂಡ್ ಕುಸಿದು ಮನೆ ಭಾಗಶಃ ಹಾನಿಯಾಗಿರುತ್ತದೆ. ಅರಳ ಗ್ರಾಮದ ಆಲ್ಮುಡೆ ನಿವಾಸಿ ಚಂದ್ರಾವತಿ ಕೋಂ ಉಮೇಶ್ ಅವರ ಮನೆಯ ಕಂಪೌಂಡ್ ಕುಸಿದು ಬಿದ್ದಿರುತ್ತದೆ. ಅಮ್ಟಾಡಿ ಗ್ರಾಮದ ಮುಂಡೆಗುರಿ ನಿವಾಸಿ ಜಾನಿಕ ಕೋಂ ಭುಜಂಗ ಪೂಜಾರಿ ಅವರ ಮನೆಯ ಮುಂಭಾಗದ ಶೀಟು ಮೇಲೆ ಕಂಪೌಂಡ್ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಅರಳ ಗ್ರಾಮದ ಗರುಡ ಮಹಾಕಾಳಿ ದೇವಸ್ಥಾನದ ಸಭಾಂಗಣದ ಹಿಂಭಾಗದಲ್ಲಿ ಕಂಪೌಂಡ್ ಕುಸಿದು ಬಿದ್ದು ಹಾನಿ ಸಂಭವಿಸಿರುತ್ತದೆ ಎಂದು ತಾಲೂಕು ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment