ಪುತ್ತೂರು, ಅಕ್ಟೋಬರ್ 18, 2021 (ಕರಾವಳಿ ಟೈಮ್ಸ್) : ತಾಲೂಕಿನ ಬಡಗನ್ನೂರು ಗ್ರಾಮದ ಪಾದೆಕರ್ಯ ನಿವಾಸಿ ವೃದ್ದ ದಂಪತಿಗಳಾದ ಕೆ ಸುಬ್ರಹ್ಮಣ್ಯ ಭಟ್ (84) ಹಾಗೂ ಶಾರದಾ (78) ಅವರು ಭಾನುವಾರ (ಅ 17) ರಾತ್ರಿ ಮನೆ ಮಂದಿ ಮಲಗಿದ್ದ ವೇಳೆ ಮನೆ ಪ್ರತ್ಯೇಕ ಕೋಣೆಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದಾರೆ.
ಮೃತ ದಂಪತಿ ತನ್ನ ಪುತ್ರ ಕೆ ನಾಗೇಶ್ ಭಟ್ (62) ದಂಪತಿ ಹಾಗೂ ಮಕ್ಕಳ ಜೊತೆ ಮನೆಯಲ್ಲಿ ಒಟ್ಟಿಗೆ ವಾಸವಾಗಿದ್ದು, ಎಂದಿನಂತೆ ಮನೆ ಮಂದಿ ಭಾನುವಾರ ರಾತ್ರಿ ಕೂಡಾ 10 ಗಂಟೆ ವೇಳೆಗೆ ಊಟ ಮುಗಿಸಿ ಮಲಗಿಕೊಂಡಿದ್ದರು. ನಾಗೇಶ್ ಭಟ್ ದಂಪತಿ ಹಾಗೂ ಮಕ್ಕಳು ಮನೆಯ ಮಹಡಿಯ ಕೋಣೆಯಲ್ಲಿ ಮಲಗಿದ್ದರೆ, ಸುಬ್ರಹ್ಮಣ್ಯ ಭಟ್ ಹಾಗೂ ಪತ್ನಿ ಶಾರದಾ ಅವರು ಕೆಳಗಿನ ಕೋಣೆಯಲ್ಲಿ ಮಲಗಿದ್ದರು. ಸೋಮವಾರ (ಅ 18) ಬೆಳಿಗ್ಗೆ 6 ಗಂಟೆಯಾದರೂ ದಂಪತಿ ಎದ್ದು ಬಾರದ್ದನ್ನು ಕಂಡ ನಾಗೇಶ್ ಭಟ್ ಅವರ ಪತ್ನಿ ಕೋಣೆಯಲ್ಲಿ ಹೋಗಿ ನೋಡಿದಾಗ ಶಾರದಾ ಅವರು ಕುತ್ತಿಗೆ ಹಾಗೂ ಫ್ಯಾನಿಗೆ ನೈಲಾನ್ ಹಗ್ಗ ಕಟ್ಟಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಈ ಬಗ್ಗೆ ಅವರು ಪತಿಯಲ್ಲಿ ತಿಳಿಸಿದಾಗ ಪತಿ ಕೂಡಾ ಬಂದು ನೋಡಿದಾಗ ತಾಯಿ ನೇಣು ಬಿಗಿದ ಸ್ಥಳದಲ್ಲಿ ತಂದೆ ಇಲ್ಲದೆ ಇದ್ದುದನ್ನು ಗಮನಿಸಿ ಹುಡುಕಾಡಿದಾಗ ಮನೆಯ ಇನ್ನೊಂದು ಕೋಣೆಯಲ್ಲಿ ಫ್ಯಾನಿಗೆ ಹಗ್ಗ ಕಟ್ಟಿ ತಂದೆಯೂ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
ತಾಯಿ ಶಾರದಾ ಅವರು ಸಕ್ಕರೆ ಕಾಯಿಲೆ ಹಾಗೂ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ಕಾರಣಕ್ಕೆ ತಾಯಿ ಜೊತೆ ತಂದೆಯೂ ಕೂಡಾ ಮನನೊಂದು ರಾತ್ರಿ ವೇಳೆ ಮನೆ ಮಂದಿ ಮಲಗಿದ್ದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರ ಪುತ್ರ ನಾಗೇಶ್ ಭಟ್ ಅವರು ಪೊಲೀಸರಿಗೆ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಯುಡಿಆರ್ ಸಂಖ್ಯೆಯ 35/2021 ಕಲಂ 174 ಸಿ.ಆರ್.ಪಿ.ಸಿ.ಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment