ಸ್ನೇಹಿತನೋ, ಹತ್ತಿರದ ಬಂಧುವೊ ಅಲ್ಲದಿದ್ದರೂ ಅಭಿಮಾನಿಗಳ ಮನೆ-ಮನದಲ್ಲಿ ಅಚ್ಚೊತ್ತಿದ್ದ ಚಂದನವನದ ಯುವರತ್ನ
ಶುಭ್ರ ಪುತ್ರಕಳದ್ವಿತೀಯ ಪತ್ರಿಕೋದ್ಯಮ, ವಿವೇಕಾನಂದ ಕಾಲೇಜು ಪುತ್ತೂರು
ಅಪ್ಪು ಇನ್ನಿಲ್ಲ.....!! ಕಂಗಳು ತಂತಾನೆ ತೇವಗೊಂಡಿದ್ದವು, ಆತ ನನ್ನ ಸ್ನೇಹಿತನೋ, ಹತ್ತಿರದ ಬಂಧುವೊ ಯಾರು ಕೂಡ ಅಲ್ಲ. ಅಭಿಮಾನಿಗಳ ಮನೆ-ಮನದಲ್ಲಿ ಅಚ್ಚೊತ್ತಿದ್ದ ಚಂದನವನದ ಯುವರತ್ನ ಇನ್ನಿಲ್ಲ ಎಂಬ ಸತ್ಯವನ್ನು ಅರಗಿಸಿಕೊಳ್ಳಲು ಮನಸ್ಸು ಒಪ್ಪುತ್ತಲೇ ಇಲ್ಲ. ಎಲ್ಲ ಕನಸಿನಂತೆ ಭಾಸವಾಗುತ್ತಿದೆ.
ಪುನೀತ್ ಕೇವಲ ಸಿನಿಮಾ ನಟ ಮಾತ್ರವಲ್ಲ ಸಾಮಾಜಿಕ ಕಾರ್ಯದಲ್ಲಿ ಸದಾ ತಮ್ಮನ್ನು ತೊಡಗಿಸಿಕೊಂಡು ಜನರ ನೋವಿಗೆ ಮಿಡಿಯುತ್ತಿದ್ದ ಹೃದಯ ಶ್ರೀಮಂತ “ಪುನೀತ”..... ಆದರೆ ಆ ವಿಶಾಲ ಹೃದಯಿಯ ಹೃದಯ ಬಡಿತವೇ ನಿಂತು ಹೋಗಿದೆ ಎಂದರೆ......!!
ಸರ್ವ ಶಿಕ್ಷಣ ಅಭಿಯಾನ, ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ, ಪಲ್ಸ್ ಪೆÇೀಲಿಯೋ ಜಾಗೃತಿ ಅಭಿಯಾನ, ರಕ್ತದಾನ ಮಾಡಿ ಜೀವ ಉಳಿಸಿ, ಫಿಟ್ ಇಂಡಿಯಾ ಚಾಲೆಂಜ್, ಅಂತಾರಾಷ್ಟ್ರೀಯ ಯೋಗದಿನ, ಸ್ವಚ್ಚ ಭಾರತ ಅಭಿಯಾನ ಹೀಗೆ ಸರಕಾರ ಮತ್ತು ಅನೇಕ ಸಂಘ-ಸಂಸ್ಥೆಗಳು ನಡೆಸುತ್ತಿದ್ದ ಕಾರ್ಯಕ್ರಮಗಳಲ್ಲಿ ಸಂಭಾವನೆಯನ್ನು ಅಪೇಕ್ಷಿಸದೆ ಪಾಲ್ಗೊಳ್ಳುತ್ತಿದ್ದ ಪುನೀತ್ ಅಗಲಿಕೆ ತುಂಬಲಾರದ ನಷ್ಟವೇ ಸರಿ.
ಉತ್ತಮ ನಟ, ಗಾಯಕ, ನಿರೂಪಕ, ಡಾನ್ಸರ್, ಸಮಾಜ ಸೇವಕ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮದೇ ಛಾಪು ಮೂಡಿಸಿ ಮೆರೆದಿದ್ದ ಪುನೀತ್ ಕೋಸ್ಟಲ್ ವುಡ್ ನ “ಉಮಿಲ್” ಸಿನಿಮಾದ ಟೈಟಲ್ ಸಾಂಗ್ ಕೂಡ ಹಾಡಿದ್ದರು. ತಮ್ಮ ಕಂಗಳನ್ನು ದಾನ ಮಾಡಿ ಅಂಧರ ಪಾಲಿಗೆ ಬೆಳಕಾದ ಅಪ್ಪು, ಸಾವಿನಲ್ಲೂ ಸಾರ್ಥಕತೆಯನ್ನು ಪಡೆದುಕೊಂಡರು.
ದೊಡ್ದ್ಮನೆ ಹುಡುಗನ ದಿಢೀರ್ ನಿರ್ಗಮನದಿಂದ ಕರ್ನಾಟಕದಾದ್ಯಂತ ಸೂತಕದ ವಾತಾವರಣ, ತಮ್ಮ ಮನೆಯ ಸದಸ್ಯನನ್ನೇ ಕಳೆದುಕೊಂಡಂತೆ ಅನಿಸುತ್ತಿದೆ... ದೊಡ್ಡಸ್ತಿಕೆ ಇಲ್ಲದ, ಸರಳ, ಸಜ್ಜನಿಕೆಯನ್ನು ಮೈಗೂಡಿಸಿಕೊಂಡ ಯುವರತ್ನ ದೈಹಿಕವಾಗಿ ಈಗ ನಮ್ಮೊಂದಿಗೆ ಇಲ್ಲವಷ್ಟೇ... ಆದರೆ ಅಭಿಮಾನಿಗಳ ಹೃದಯದಲ್ಲಿ, ನೆನಪಿನಲ್ಲಿ, ಕಂಗಳಲ್ಲಿ ಸದಾ ಸ್ಥಿರಸ್ಥಾಯಿ, ಅಜರಾಮರ....
ಬೊಂಬೆ ಹೇಳುತೈತೆ, ಮತ್ತೆ ಹೇಳುತೈತೆ ನೀನೇ ರಾಜಕುಮಾರ.............
ಮತ್ತೆ ಹುಟ್ಟಿ ಬಾ
ನಟಸಾರ್ವಭೌಮ...
0 comments:
Post a Comment