ಮಂಗಳೂರು, ಅಕ್ಟೋಬರ್ 27, 2021 (ಕರಾವಳಿ ಟೈಮ್ಸ್) : ಮಂಗಳೂರು ಡಾ ಎಂ.ವಿ. ಶೆಟ್ಟಿ ಸ್ಮಾರಕ ಟ್ರಸ್ಟ್ ಆಶ್ರಯದಲ್ಲಿ ಕರ್ನಾಟಕದ ಎ¯್ಲÁ ಫಿಸಿಯೋಥೆರಪಿ ಕಾಲೇಜುಗಳಿಗಾಗಿ ನಡೆದ 26ನೇ ಅಂತರ ಕಾಲೇಜು ಕ್ರಿಕೆಟ್ ಪಂದ್ಯಾವಳಿಯಲ್ಲಿ ನಗರದ ಶ್ರೀದೇವಿ ಕಾಲೇಜ್ ಆಫ್ ಫಿಸಿಯೋಥೆರಪಿ ಬಾಲಕರ ಹಾಗೂ ಬಾಲಕಿಯರ ತಂಡ ಜಯಗಳಿಸಿದೆ.
ಅಕ್ಟೋಬರ್ 20, 21 ರಂದು ಮಂಗಳೂರಿನ ಪಣಂಬೂರು ಎನ್‍ಎಂಪಿಟಿ ಡಾ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾಟದಲ್ಲಿ ಕರ್ನಾಟಕದ ವಿವಿಧ ಫಿಸಿಯೋಥೆರಪಿ ಕಾಲೇಜುಗಳಿಂದ ಒಟ್ಟು 19 ಬಾಲಕರ ತಂಡ ಮತ್ತು 14 ಬಾಲಕಿಯರ ತಂಡಗಳು ಭಾಗವಹಿಸಿತ್ತು.
ಸೆಮಿಫೈನಲ್‍ನಲ್ಲಿ ಶ್ರೀದೇವಿ ಕಾಲೇಜ್ ಆಫ್ ಫಿಸಿಯೋಥೆರಪಿ ಬಾಲಕರ ತಂಡ ಬೆಂಗಳೂರಿನ ಗಾರ್ಡನ್ ಸಿಟಿ ಕಾಲೇಜ್ ಆಫ್ ಫಿಸಿಯೋಥೆರಪಿ ವಿರುದ್ಧದ ಪಂದ್ಯದಲ್ಲಿ ಜಯಗಳಿಸುವ ಮೂಲಕ ಫೈನಲ್‍ಗೆ ಪ್ರವೇಶಿಸಿತು. ಮತ್ತು ಅಂತಿಮ ಪಂದ್ಯದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿe್ಞÁನಗಳ ಸಿಬ್ಬಂದಿ ತಂಡದ ವಿರುದ್ಧ ಶ್ರೀ ದೇವಿ ಫಿಸಿಯೋಥೆರಪಿ ಕಾಲೇಜು ತಂಡ ಜಯಗಳಿಸಿದೆ.
ಬಾಲಕಿಯರ ವಿಭಾಗದ ಫೈನಲ್‍ನಲ್ಲಿ ಶ್ರೀ ದೇವಿ ಫಿಸಿಯೋಥೆರಪಿ ಕಾಲೇಜು ತಂಡ ಕಣಚೂರು ಕಾಲೇಜ್ ಆಫ್ ಫಿಸಿಯೋಥೆರಪಿ ವಿರುದ್ಧ ಜಯ ಗಳಿಸಿದೆ.
ಕೂಟದ ಉತ್ತದ ದಾಂಡಿಗರಾಗಿ ಶ್ರೀ ದೇವಿ ಫಿಸಿಯೋಥೆರಪಿ ಕಾಲೇಜಿನ ಮುಹಮ್ಮದ್ ನಿಹಾಲ್, ಉತ್ತಮ ದಾಳಿಗಾರರಾಗಿ ಜಾಬಿನ್ ಜೋಸೆಫ್ ಹಾಗೂ ಉತ್ತಮ ಕ್ಷೇತ್ರ ರಕ್ಷಕರಾಗಿ ಸ್ಟೀವೋ ಸೆಬಾಸ್ಟಿಯನ್ ಅವರು ಹಾಗೂ ಬಾಲಕಿಯರ ವಿಭಾಗದಲ್ಲಿ ಶ್ರೀ ದೇವಿ ಕಾಲೇಜ್ ಆಫ್ ಫಿಸಿಯೋಥೆರಪಿ ತಂಡದ ಅಶ್ವತಿ ಅನಿಲ್‍ಕುಮಾರ್ ಉತ್ತಮ ಸವ್ಯಸಾಚಿಯಾಗಿ ಮೂಡಿ ಬಂದರೆ, ಅಂಜಲಿ ಅನಿಲ್‍ಕುಮಾರ್ ಉತ್ತಮ ಕ್ಷೇತ್ರ ರಕ್ಷಕರಾಗಿ ವೈಯುಕ್ತಿಕ ಪ್ರಶಸ್ತಿ ಪಡೆದುಕೊಂಡರು.
0 comments:
Post a Comment