ಬಂಟ್ವಾಳ, ಅಕ್ಟೋಬರ್ 19, 2021 (ಕರಾವಳಿ ಟೈಮ್ಸ್) : ತಾಲೂಕಿನ ನೇರಳಕಟ್ಟೆ ಸಮೀಪದ ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಮಸೀದಿ ಹಾಗೂ ಇದರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರುಲ್ ಹುದಾ ಮದ್ರಸ ಆಶ್ರಯದಲ್ಲಿ ಅಂತ್ಯಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ರವರ ಜನ್ಮದಿನ ಪ್ರಯುಕ್ತ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸನ್ಮಾನ ಸಮಾರಂಭ ಮಂಗಳವಾರ ಮಸೀದಿ ವಠಾರದಲ್ಲಿ ನಡೆಯಿತು.
ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಹಾಜಿ ಪಿ.ಕೆ. ಆದಂ ದಾರಿಮಿ ಕಾರ್ಯಕ್ರಮ ಉದ್ಘಾಟಿಸಿದರು. ಅಬ್ದುಲ್ ಅಝೀಝ್ ದಾರಿಮಿ ಪೆÇನ್ಮಲ ಅಧ್ಯಕ್ಷತೆ ವಹಿಸಿದ್ದರು.
ಮಸೀದಿ ಅಧ್ಯಕ್ಷ ಪಿ.ಕೆ. ರಶೀದ್ ಪರ್ಲೊಟ್ಟು, ಕಾರ್ಯದರ್ಶಿ ಸಿದ್ದೀಕ್ ಪರ್ಲೊಟ್ಟು, ದ.ಕ. ಜಿಲ್ಲಾ ಮದ್ರಸ ಮೆನೇಜ್‍ಮೆಂಟ್ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಮುಹಮ್ಮದ್ ರಫೀಕ್ ಹಾಜಿ ನೇರಳಕಟ್ಟೆ, ಪ್ರಮುಖರಾದ ಪಿ.ಕೆ. ಅಬ್ದುಲ್ ಖಾದರ್ ಪರ್ಲೊಟ್ಟು, ಹಾಜಿ ಉಮ್ಮರ್ ಫಾರೂಕ್ ಸುಲ್ತಾನ್, ಪಿ.ಕೆ. ಅಬ್ಬಾಸ್ ಪರ್ಲೊಟ್ಟು, ಶಾಹುಲ್ ಹಮೀದ್, ಉಮ್ಮರ್ ಕುಂಞÂ, ಕೆ.ಬಿ. ಇಸ್ಮಾಯಿಲ್ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಇಲ್ಲಿನ ವಿಸ್ತರಿತ ಮಸೀದಿ ನಿರ್ಮಾಣ ಕಾರ್ಯದಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದ ಕಳೆದ ಬಾರಿಯ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಕೆ.ಬಿ. ಖಾಸಿಂ ಹಾಜಿ ಮಿತ್ತೂರು, ಕಾರ್ಯದರ್ಶಿ ಪಿ.ಕೆ. ಝುಬೈರ್ ಪರ್ಲೊಟ್ಟು ಹಾಗೂ ಪಿ.ಕೆ ರಶೀದ್ ಅವರನ್ನು ಸನ್ಮಾನಿಸಲಾಯಿತು.
ಮಸೀದಿ ಖತೀಬ್ ಹೈದರಾಲಿ ಮುಸ್ಲಿಯಾರ್ ಸ್ವಾಗತಿಸಿ, ಇಸಾಕ್ ಕೌಸರಿ ವಂದಿಸಿದರು. ಶರೀಫ್ ಪರ್ಲೊಟ್ಟು ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment