ಕಾಲೇಜು ಶುಲ್ಕ ಪಾವತಿಗೆ ಫೋರ್ಸ್ ಆರೋಪ : ವಿದ್ಯಾರ್ಥಿನಿ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣು - Karavali Times ಕಾಲೇಜು ಶುಲ್ಕ ಪಾವತಿಗೆ ಫೋರ್ಸ್ ಆರೋಪ : ವಿದ್ಯಾರ್ಥಿನಿ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣು - Karavali Times

728x90

6 October 2021

ಕಾಲೇಜು ಶುಲ್ಕ ಪಾವತಿಗೆ ಫೋರ್ಸ್ ಆರೋಪ : ವಿದ್ಯಾರ್ಥಿನಿ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣು

ಮಂಗಳೂರು, ಅಕ್ಟೋಬರ್ 07, 2021 (ಕರಾವಳಿ ಟೈಮ್ಸ್) : ನಗರದ ಕಂಕನಾಡಿಯಲ್ಲಿರುವ ಕುಲಾಸೋ ಕಾಲೇಜ್ ಆಫ್ ನರ್ಸಿಂಗ್ ಇದರ ಹಾಸ್ಟೆಲ್ ಬಾತ್ ರೂಮಿನಲ್ಲಿ ಕೇರಳ ಮೂಲದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿನಿ ನೀನಾ (19) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕಾಡುಮೆನಿ ಗ್ರಾಮದ ನಿವಾಸಿ ನೀನಾ ಕೋವಿಡ್-19 ಸಾಂಕ್ರಾಮಿಕದಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಪೆÇೀಷಕರಿಗೆ ತನ್ನ ಶಿಕ್ಷಣದ ವೆಚ್ಚದೊಂದಿಗೆ ಮತ್ತಷ್ಟು ಹೊರೆಯಾಗಲು ಇಷ್ಟಪಡುವುದಿಲ್ಲ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ. 

ನಗರದ ಕುಲಾಸೊ ಪ್ರಥಮ ವರ್ಷದ ಬಿಎಸ್ಸಿ ನರ್ಸಿಂಗ್ ಕೋರ್ಸ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ, 75 ಸಾವಿರ ರೂಪಾಯಿ ಶುಲ್ಕವನ್ನು ಈಗಾಗಲೇ ಪಾವತಿಸಿದ್ದಳು ಎನ್ನಲಾಗಿದೆ. ಆದರೂ, ಆಕೆಯ ಯೂನಿಫಾರಂಗಾಗಿ ಉಳಿದ ಹಣಕ್ಕಾಗಿ ಕಾಲೇಜ್ ಮಂಡಳಿ ಪೀಡಿಸುತ್ತಿತ್ತು ಎಂಬ ವಿಚಾರ ವಿದ್ಯಾರ್ಥಿನಿ ಬರೆದಿರುವ ಡೆತ್ ನೋಟ್ ಮೂಲಕ ಬಹಿರಂಗವಾಗಿದೆ. ಈ ಬಗ್ಗೆ ಅಸ್ವಾಭಾವಿಕ ಸಾವು ವರದಿ ದಾಖಲಿಸಿಕೊಳ್ಳಲಾಗಿದೆ ಎಂದು ಮಂಗಳೂರು ಪೂರ್ವ ಪೆÇಲೀಸರು ತಿಳಿಸಿದ್ದಾರೆ. 

ಮಂಗಳವಾರ ಬಾತ್ ರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಆಕೆ ಸೋಮವಾರ ಬರೆದಿರುವ ಡೆತ್ ನೋಟ್ ನ್ನು ತನಿಖಾ ತಂಡ ವಶಕ್ಕೆ ಪಡೆದಿದೆ. ಈ ಘಟನೆ ಬುಧವಾರ ತಡವಾಗಿ ಬೆಳಕಿಗೆ ಬಂದಿದೆ ಎಂದು ಮಂಗಳೂರು ನಗರ ಪೆÇಲೀಸ್ ಆಯುಕ್ತ ಎನ್ ಶಶಿಕುಮಾರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. 

ಸಾವಿನ ಕುರಿತು ಅನುಮಾನಗಳು ಉಂಟಾದ ಹಿನ್ನೆಲೆಯಲ್ಲಿ ನೀಲಾ ತಾಯಿ, ಸೋದರ ಮಾವ ಹಾಗೂ ಆಕೆಯ ಸಹಪಾಠಿಗಳೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಕಮಿಷನರ್ ತಿಳಿಸಿದ್ದಾರೆ. 

  • Blogger Comments
  • Facebook Comments

0 comments:

Post a Comment

Item Reviewed: ಕಾಲೇಜು ಶುಲ್ಕ ಪಾವತಿಗೆ ಫೋರ್ಸ್ ಆರೋಪ : ವಿದ್ಯಾರ್ಥಿನಿ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣು Rating: 5 Reviewed By: karavali Times
Scroll to Top