ಅಬುಧಾಬಿ, ಅಕ್ಟೋಬರ್ 27, 2021 (ಕರಾವಳಿ ಟೈಮ್ಸ್) : ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ನಮಿಯಾ ತಂಡ ಸ್ಕಾಟ್‌ಲೆಂಡ್ ವಿರುದ್ಧ 4 ವಿಕೆಟ್ ಗೆಲುವು ಸಂಪಾದಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ನಮಿಬಿಯಾ ನ್ಯೂಜಿಲೆಂಡ್ ಹಾಗೂ ಭಾರತ ತಂಡವನ್ನು ಹಿಂದಿಕ್ಕಿ 3ನೇ ಸ್ಥಾನ ಅಲಂಕರಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಸ್ಕಾಟ್‌ಲೆಂಡ್ ತಂಡ 20 ಓವರ್ ಅಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 109 ಗಳಿಸಿತು. ಜಾರ್ಜ್ ಮುನ್ಸೆ ಡಕೌಟ್ ಆದರೆ, ಮ್ಯಾಥ್ಯೂ ಕ್ರಾಸ್ 19 ರನ್ ಗಳಿಸಿದರು. ಮೆಕ್ಲಾಯ್ಡ್ ಹಾಗೂ ನಾಯಕ ರಿಚಿ ಬೆರಿಂಗ್ಟನ್ ಡಕೌಟ್ ಆದರು. ಬಳಿಕ ಮಚೆಲಿ ಲಿಸ್ಕ್ ತಂಡಕ್ಕೆ ಆಸರೆಯಾದರು. ಲಿಸ್ಕ್ 44 ರನ್ ಸಿಡಿಸಿ ಔಟಾದರು. ಕ್ರಿಸ್ 25 ರನ್, ಡೇವಿ 5 ಎಸೆತದಲ್ಲಿ ಅಜೇಯ 5 ರನ್ ಸಿಡಿಸಿದರು.
110 ರನ್ ಟಾರ್ಗೆಟ್ ಪಡೆದ ನಮಿಬಿಯಾ ನಿಧಾನಗತಿಯಲ್ಲಿ ಆಟ ಆರಂಭಿಸಿತು. ಕ್ರೈಗ್ ವಿಲಿಯಮ್ಸ್ ಹಾಗೂ ಮಿಚೆಲ್ ವ್ಯಾನ್ ಲಿಂಜೆನ್ 28 ರನ್ ಜೊತೆಯಾಟ ನೀಡಿದರು. ಮಿಚೆಲ್ 28 ರನ್ ಸಿಡಿಸಿ ಔಟಾದರು. ಝೇನ್ ಗ್ರೀನ್ 9 ರನ್ ಸಿಡಿಸಿ ಔಟಾದರು. ದಿಟ್ಟ ಹೋರಾಟ ನೀಡಿದ ಕ್ರೈಗ್ ವಿಲಿಯಮ್ಸ್ 23 ರನ್ ಸಿಡಿಸಿ ಔಟಾದರು.
67 ರನ್‌ಗೆ 4 ವಿಕೆಟ್ ಕಳೆದುಕೊಂಡ ನಮಿಬಿಯಾ ಸಂಕಷ್ಟಕ್ಕೆ ಸಿಲುಕಿತ್ತು. ಡಿವೇಡ್ ವೈಸ್ ಹಾಗೂ ಜೆಜೆ ಸ್ಮಿತ್ ಹೋರಾಟದಿಂದ ನಮಿಬಿಯಾ ಮತ್ತೆ ಚೇತರಿಸಿಕೊಂಡಿತು. ನಮಿಬಿಯಾ ಗೆಲುವಿಗೆ ಅಂತಿಮ 18 ಎಸೆತದಲ್ಲಿ 14 ರನ್ ಅವಶ್ಯಕತೆ ಇತ್ತು. ಸಿಕ್ಸರ್ ಸಿಡಿಸಿ ಅಬ್ಬರಿಸಿದ ವೈಸ್ ಮರು ಎಸೆತದಲ್ಲಿ ಔಟಾದರು. ವೈಸ್ 16 ರನ್ ಸಿಡಿಸಿದರು. ಅಷ್ಟರಲ್ಲಿ ನಮಿಬಿಯಾ ಗೆಲುವಿಗೆ 14 ಎಸೆತದಲ್ಲಿ 8 ರನ್ ಅವಶ್ಯತೆ ಇತ್ತು. ಸ್ಮಿತ್ ಅಜೇಯ 32 ರನ್ ಸಿಡಿಸಿದರು. ಈ ಮೂಲಕ ನಮಿಬಿಯಾ 19.1 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
2ನೇ ಗುಂಪಿನಲ್ಲಿರುವ ನಮಿಬಿಯಾ ತಂಡ ಸ್ಕಾಟ್‌ಲೆಂಡ್ ವಿರುದ್ಧ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಪಾಕಿಸ್ತಾನ, ಆಫ್ಘಾನಿಸ್ತಾನದ ಬಳಿಕ ನಮಿಬಿಯಾ 3ನೇ ಸ್ಥಾನ ಅಲಂಕರಿಸಿದೆ. ತಲಾ ಒಂದೊಂದು ಸೋಲು ಅನುಭವಿಸಿರುವ ನ್ಯೂಜಿಲೆಂಡ್ ಹಾಗೂ ಟೀಂ ಇಂಡಿಯಾ 4 ಮತ್ತು 5ನೇ ಸ್ಥಾನದಲ್ಲಿದೆ. ನಮಿಬಿಯಾ ಹಾಗೂ ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನ ವಿರುದ್ಧ ಮುಗ್ಗರಿಸಿದ ಸ್ಕಾಟ್‌ಲೆಂಡ್ 6ನೇ ಸ್ಥಾನದಲ್ಲಿದೆ.
ಸ್ಕಾಟ್‌ಲೆಂಡ್ ವಿರುದ್ದ ಗೆಲುವು ಸಾಧಿಸಿರುವ ನಮಿಬಿಯಾ ಅಕ್ಟೋಬರ್ 31 ರಂದು ಆಫ್ಘಾನಿಸ್ತಾನ ವಿರುದ್ಧ ಸೆಣಸಾಟ ನಡೆಸಲಿದೆ. ನವೆಂಬರ್ 2 ರಂದು ನಮಿಬಿಯಾ ಪಾಕಿಸ್ತಾನ ವಿರುದ್ಧ ಹೋರಾಟ ನಡೆಸಲಿದೆ. ನಾಳೆ(ಅ.28) ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಮುಖಾಮುಖಿಯಾಗಲಿದೆ.
0 comments:
Post a Comment