ಬಂಟ್ವಾಳ, ಅಕ್ಟೋಬರ್ 28, 2021 ( ಕರಾವಳಿ ಟೈಮ್ಸ್) : ತಾಲೂಕಿನ ಬಿ ಸಿ ರೋಡು ಸಮೀಪದ ಪೆÇಳಲಿ ರಸ್ತೆಯ ಕಲ್ಪನೆಯಲ್ಲಿ ಗುರುವಾರ ಖಾಸಗಿ ಬಸ್ಸು ಹಾಗೂ ಆಟೋ ರಿಕ್ಷಾ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ, ನೇರಳಕಟ್ಟೆ ನಿವಾಸಿ ಮುಹಮ್ಮದ್ ನಿಹಾಲ್ ಹಾಗೂ ಸಹ ಪ್ರಯಾಣಿಕ ಮುಹಮ್ಮದ್ ಹನೀಫ್ ಗಾಯಗೊಂಡಿದ್ದಾರೆ.
ಪೆÇಳಲಿಯಿಂದ ಬಿ ಸಿ ರೋಡ್ ಕಡೆ ಬರುತ್ತಿದ್ದ ಶುಭಲಕ್ಷ್ಮೀ ಬಸ್ ಹಾಗೂ ಬಿ ಸಿ ರೋಡಿನಿಂದ ಅಡ್ಡೂರು ಕಡೆ ತೆರಳುತ್ತಿದ್ದ ಆಟೋ ರಿಕ್ಷಾ ತೆಂಕಬೆಳ್ಳೂರು ಗ್ರಾಮದ ಕಲ್ಪನೆ ಬಳಿ ಇಳಿಜಾರು ಹಾಗೂ ತಿರುವು ರಸ್ತೆಯಲ್ಲಿ ಮುಖಾಮುಖಿ ಢಿಕ್ಕಿಯಾಗಿ ಈ ಅವಘಡ ಸಂಭವಿಸಿದೆ.
ರಿಕ್ಷಾ ಚಾಲಕ ಹಾಗೂ ಸಹ ಪ್ರಯಾಣಿಕ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಬಸ್ಸು ಚಾಲಕ ಕೃಷ್ಣಪ್ಪ ಆಚಾರ್ಯ ನೀಡಿದ ದೂರಿನಂತೆ ಬಂಟ್ವಾಳ ಸಂಚಾರಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 112/2021 ಕಲಂ 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.
0 comments:
Post a Comment