ಮಂಗಳೂರು, ಅಕ್ಟೋಬರ್ 03, 2021 (ಕರಾವಳಿ ಟೈಮ್ಸ್) : ಮಂಗಳೂರು ಕಲ್ಕೂರ ಪ್ರತಿಷ್ಠಾನ ಹಾಗೂ ಮಂಗಳೂರು ಮಕ್ಕಿಮನೆ ಕಲಾವೃಂದದ ಜಂಟಿ ಆಶ್ರಯದಲ್ಲಿ ಮಹಾತ್ಮ ಗಾಂಧಿ ಜಯಂತಿ ದಿನಾಚರಣೆ ಶನಿವಾರ (ಅಕ್ಟೋಬರ್ 2) ನಗರದ ವುಡ್ ಲ್ಯಾಂಡ್ಸ್ ಹೊಟೇಲ್ ಆವರಣದಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮೂಡುಬಿದಿರೆಯ ನೋಟರಿ-ನ್ಯಾಯವಾದಿ ಶ್ವೇತಾ ಜೈನ್, ಸತ್ಯ, ಶಾಂತಿ, ಅಹಿಂಸೆಯ ದಾರಿಯಲ್ಲಿ ನಾವು ಎಲ್ಲರೂ ಸಾಗೋಣ. ಎಲ್ಲರನ್ನು ಪ್ರೀತಿಯಿಂದ ಗೆಲ್ಲೋಣ, ಭವ್ಯ ಪರಂಪರೆಯ ಸದೃಢ ಭಾರತ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಪರಕೀಯರ ಆಂಗ್ಲರ ದಾಸ್ಯಕ್ಕೆ ಸಿಲುಕಿದ್ದ ದೇಶಕ್ಕೆ ಅಹಿಂಸಾ ಮಾರ್ಗದಿಂದ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರ ಬದುಕಿನ ವಿಚಾರಧಾರೆಗಳು ಅವಿಸ್ಮರಣೀಯ. ಜಗತ್ತಿನಲ್ಲಿ ಗಾಂಧೀಜಿಯವರು ಬಾಳಿ ಬದುಕಿದ ಇತಿಹಾಸ ಬಹು ಸ್ಪೂರ್ತಿದಾಯಕವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ರಂಗಭೂಮಿ ಹಾಗೂ ಚಲನಚಿತ್ರ ನಟ ಭೋಜರಾಜ್ ವಾಮಂಜೂರು, ಮಂಗಳೂರು ಜೈನ್ ಟ್ರಾವೆಲ್ಸ್ ಮಾಲಕ ರತ್ನಾಕರ ಜೈನ್, ಕರ್ನಾಟಕ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಸುದೇಶ್ ಕುಮಾರ್, ಶ್ರೀರತ್ನ ಪ್ರತಿಷ್ಠಾನದ ಟ್ರಸ್ಟಿ ಮಾಧವ ಎಂ ಎಸ್ ಶಿವಮೊಗ್ಗ, ಮಕ್ಕಿಮನೆ ಕಲಾವೃಂದದ ಸುದೇಶ್ ಜೈನ್ ಮಕ್ಕಿಮನೆ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ರಾಷ್ಟ್ರೀಯ ಸೇವಾ ಯೋಜನೆಯ 2019-20ನೇ ಸಾಲಿನ ರಾಷ್ಟ್ರ ಪ್ರಶಸ್ತಿ ವಿಜೇತೆ ಬಿಂದಿಯಾ ಎಲ್ ಶೆಟ್ಟಿ ಸುರತ್ಕಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮಕ್ಕಿಮನೆ ಕಲಾವೃಂದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ನಡೆದ ಶ್ರೀ ಕೃಷ್ಣ ವೇಷ ಪೆÇೀಟೋ ಸ್ಪರ್ಧೆ-2021ರ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ನವರಾತ್ರಿ ದಸರಾ ಮಹೋತ್ಸವ-2021ರ ಅಂಗವಾಗಿ 9ದಿನಗಳ ಪರ್ಯಂತ ಅನ್ ಲೈನ್ ಮೂಲಕ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಪೆÇೀಸ್ಟರ್ ಬಿಡುಗಡೆ ಮಾಡಲಾಯಿತು.
ಶ್ರೇಯಾ ಭಟ್ ಮಂಗಳೂರು, ಸಂತೋಷ್ ಕುಮಾರ್ ಕುಳಾಯಿ, ರಮೇಶ್ ಮಂಗಳೂರು, ಶಿಖಾ ಸಾಲ್ಯಾನ್ ಮಂಗಳೂರು ಸಹಕರಿಸಿದರು. ಅಪೇಕ್ಷಾ ಎ ಹಾಗೂ ಪ್ರತೀಕ್ಷಾ ಎ ಪ್ರಾರ್ಥನೆ ಸಲ್ಲಿಸಿದರು. ಚಿರಾಗ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.
0 comments:
Post a Comment