ಬಂಟ್ವಾಳ, ಅಕ್ಟೋಬರ್ 27, 2021 ( ಕರಾವಳಿ ಟೈಮ್ಸ್) : ತಾಲೂಕಿನ ಪುದು ಗ್ರಾಮದ ಮಾರಿಪಳ್ಳ ನಿವಾಸಿ ಇತಿಶಾಂ ಅವರು ರಾಷ್ಷ್ರಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಅ
ಅಕ್ಟೋಬರ್ 29 ರಿಂದ 31ರವರೆಗೆ ಹರಿಯಾಣದ ಎಂ ಡಿ ವಿಶ್ವವಿದ್ಯಾಲಯದಲ್ಲಿ ಹರಿಯಾಣದಲ್ಲಿ ನಡೆಯಲಿರುವ 44ನೇ ಹಿರಿಯ ವಿಭಾಗದ ಪುರುಷ ಹಾಗೂ ಮಹಿಳೆಯರ ರಾಷ್ಟ್ರೀಯ ಮಟ್ಟದ ತ್ರೋಬಾಲ್ ಪಂದ್ಯಾವಳಿಯಲ್ಲಿ ಬಂಟ್ವಾಳ ತಾಲೂಕು ಪುದು ಗ್ರಾಮದ ಮಾರಿಪಳ್ಳದ ಇತಿಶಾಮ್ ಅವರು ಕರ್ನಾಟಕ ತಂಡವನ್ನು ಪ್ರತಿನಿಧಿಸಲಿದ್ದಾರೆ.
ಮಂಗಳೂರು-ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನ ದ್ವಿತೀಯ ಬಿ ಕಾಂ ಪದವಿ ವಿದ್ಯಾರ್ಥಿಯಾಗಿರುವ ಇವರು ಮಾರಿಪಳ್ಳ ನಿವಾಸಿ ಇಸ್ಮಾಯಿಲ್-ಝುಭೈದ ದಂಪತಿಯ ಪುತ್ರ.
ಸುಜೀರು ಶಾಲೆ ಹಾಗೂ ಬಿ ಸಿ ರೋಡು-ಮೊಡಂಕಾಪು ಕಾರ್ಮೆಲ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದಾರೆ. ಪಿ ಯು ಸಿ ವಿದ್ಯಾಭ್ಯಾಸದ ಸಂದರ್ಭದಲ್ಲೂ ರಾಷ್ಟ್ರ ಮಟ್ಟದ ತ್ರೋಬಾಲ್ ಪಂದ್ಯಾಟಕ್ಕೆ ಇವರು ಆಯ್ಕೆಯಾಗಿದ್ದು, ಇದೀಗ ಎರಡನೇ ಬಾರಿಗೆ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.
0 comments:
Post a Comment