ಹಾನಗಲ್, ಅಕ್ಟೋಬರ್ 22, 2021 (ಕರಾವಳಿ ಟೈಮ್ಸ್) : ಇಲ್ಲಿನ ವಿಧಾನಸಭಾ ಕ್ಷೇತ್ರದ ಬೊಮ್ಮನಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತ್ ಪ್ರದೇಶಗಳಾದ ಕೊಪ್ಪರಿಸಿ ಕೊಪ್ಪ, ಬೊಮ್ಮನಹಳ್ಳಿ ಗ್ರಾ ಪಂ, ಕರಗುದುರಿ ಗ್ರಾ ಪಂ, ಹುಲ್ಲತ್ತಿ ಗ್ರಾ ಪಂ, ಬೈಚುಳ್ಳಿ ಗ್ರಾ ಪಂ, ಏಳವಟ್ಟಿ ಗ್ರಾ ಪಂ ವ್ಯಾಪ್ತಿಯಗಳಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ನೇತೃತ್ವದ ಕೈ ಪಾಳಯ ಶುಕ್ರವಾರ ಬಿರುಸಿನ ಚುನಾವಣಾ ಪ್ರಚಾರ ಕೈಗೊಂಡಿದೆ.
ಈ ಸಂದರ್ಭ ಮಾಜಿ ಸಚಿವ ಡಿ ಆರ್ ಪಾಟೀಲ್, ಮಾಜಿ ಶಾಸಕ ರಾಮ್ ಕೃಷ್ಣ, ಕಾಂಗ್ರೆಸ್ ಮುಖಂಡರಾದ ಮುಕುಂದ್ರ ರಾವ್ ಭವಾನಿ ಮಟ್, ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಸದಸ್ಯ ಯಾಸಿರ್ ಖಾನ್ ಫಾಟನ್, ಕೆಪಿಸಿಸಿ ಸಂಯೋಜಕಿ ಅನಿತಾ ರಾವ್ ಮೊದಲಾದವರು ಪಾಲ್ಗಗೊಂಡಿದ್ದರು.
0 comments:
Post a Comment