ಬಂಟ್ವಾಳ, ಅಕ್ಟೋಬರ್ 04, 2021 (ಕರಾವಳಿ ಟೈಮ್ಸ್) : ಪಾಣೆಮಂಗಳೂರು ಸಮೀಪದ ಆಲಡ್ಕ-ಬಂಗ್ಲೆಗುಡ್ಡೆ ನಿವಾಸಿ ಹಬೀಬುಲ್ಲಾ (36) ಅವರು ಅನಾರೋಗ್ಯದಿಂದ ಸೋಮವಾರ (ಅಕ್ಟೋಬರ್ 4) ಮುಂಜಾನೆ ನಿಧನರಾದರು.
ಮೃತರು ತಾಯಿ, ಪತ್ನಿ, ಓರ್ವಪುತ್ರ, ಇಬ್ಬರು ಪುತ್ರಿಯರು, ಸಹೋದರರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಹಬೀಬ್ ಅವರ ಅಕಾಲಿಕ ನಿಧನಕ್ಕೆ ಬಂಟ್ವಾಳ ಪುರಸಭಾ ಸ್ಥಳೀಯ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತರ ಪಾರತ್ರಿಕ ಜೀವನ ಸುಖಮಯವಾಗಲಿ ಹಾಗೂ ಅವರ ಅಕಾಲಿಕ ಅಗಲಿಕೆಯ ನೋವು ಸಹಿಸುವ ಸಹನೆಯನ್ನು ಅಲ್ಲಾಹು ಅವರ ಕುಟುಂಬಕ್ಕೆ ಹಾಗೂ ಮಿತ್ರರಿಗೆ ದಯಪಾಲಿಸಲಿ ಎಂದು ಪ್ರಾರ್ಥಿಸಿದ್ದಾರೆ.
0 comments:
Post a Comment