ಬಂಟ್ವಾಳ, ಅಕ್ಟೋಬರ್ 02, 2021 (ಕರಾವಳಿ ಟೈಮ್ಸ್) : ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 152ನೇ ಜನ್ಮ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಬಿ ರಮಾನಾಥ ರೈ ಮಾತನಾಡಿ, ಗಾಂಧೀಜಿಯವರು ನಮ್ಮ ದೇಶಕ್ಕೆ ಅಹಿಂಸಾ ಚಳವಳಿಯಿಂದ ಸ್ವಾತಂತ್ರ್ಯವನ್ನು ಗಳಿಸಲು ಮುಂಚೂಣಿಯಲ್ಲಿ ನಿಂತು ಹೋರಾಡಿದ ದಿನಗಳನ್ನು ನೆನೆಯುವುದು ಬಹಳ ಅಗತ್ಯವಾಗಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ಹಾಗೂ ಈ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ಹುತಾತ್ಮರಾದವರಿಗೆ ಅವಮಾನಿಸುವುದು ದೇಶ ದ್ರೋಹ ಮಾಡಿದಂತೆ ಎಂದು ವ್ಯಾಖ್ಯಾನಿಸಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಿ ಪದ್ಮಶೇಖರ್ ಜೈನ್, ಬಿ ಎಂ ಅಬ್ಬಾಸ್ ಅಲಿ, ಮಾಯಿಲಪ್ಪ ಸಾಲ್ಯಾನ್, ಎಂ ಎಸ್ ಮುಹಮ್ಮದ್, ಸುದರ್ಶನ್ ಜೈನ್, ಜಗನ್ನಾಥ್ ತುಂಬೆ, ಸುಧಾಕರ್ ಶೆಣೈ, ಬಿ ಅರ್ ಅಂಚನ್, ಸದಾನಂದ ಶೆಟ್ಟಿ, ವೆಂಕಪ್ಪ ಪೂಜಾರಿ, ಅಮ್ಮು ಅರಬ್ಬಿ ಗುಡ್ಡೆ, ಚಿಕ್ಕು ಅರಬ್ಬಿ ಗುಡ್ಡೆ, ಗಂಗಾಧರ ಪೂಜಾರಿ, ಬಶೀರ್ ಟಿಪ್ಪುನಗರ, ಲಿಂಗಪ್ಪ ಕುಲಾಲ್, ಉಮೇಶ್ ಪೂಜಾರಿ, ಪ್ರತಿಭಾ ಮಂಡಾಡಿ, ಸುರೇಶ್ ಪೂಜಾರಿ ಜೋರಾ ಮೊದಲಾದವರು ಭಾಗವಹಿಸಿದ್ದರು.
0 comments:
Post a Comment