ಬಂಟ್ವಾಳ, ಅಕ್ಟೋಬರ್ 01, 2021 (ಕರಾವಳಿ ಟೈಮ್ಸ್) : ಸರಳ ಸಜ್ಜನಿಕೆಯ ವ್ಯಕ್ತಿತ್ವ ಮೈಗೂಡಿಸಿಕೊಂಡಿದ್ದ, ಸದಾ ಹಸನ್ಮುಖಿಯಾಗಿದ್ದ ಪತ್ರಕರ್ತ ಫಾರೂಕ್ ಗೂಡಿನಬಳಿ ಅವರ ಅಕಾಲಿಕ ಅಗಲಿಕೆಯು ಮನಸ್ಸಿಗೆ ಅತ್ಯಂತ ನೋವು ಹಾಗೂ ಆಘಾತ ಉಂಟು ಮಾಡಿದೆ ಎಂದು ರಾಜ್ಯ ಪರಿಸರ ಮಂಡಳಿಯ ಮಾಜಿ ಸದಸ್ಯ, ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರ (ಬುಡಾ) ದ ಮಾಜಿ ಅಧ್ಯಕ್ಷ ಪಿಯೂಸ್ ಎಲ್ ರೋಡ್ರಿಗಸ್ ತೀವ್ರ ದುಃಖ ವ್ಯಕ್ತಪಡಿಸಿದ್ದು, ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.
ಫಾರೂಕ್ ಓರ್ವ ಸರಳ ಸಜ್ಜನಿಕೆ ವ್ಯಕ್ತಿಯಾಗಿದ್ದು, ತನ್ನ ವೃತ್ತಿ ಜೀವನವನ್ನು ನನ್ನ ಮಾಲಕತ್ವದ ಲೆವಿನ್ ಇಲೆಕ್ಟ್ರಿಕಲ್ಸ್ ಸಂಸ್ಥೆಯಲ್ಲಿ ಮೀಟರ್ ರೀಡಿಂಗ್ ಮೂಲಕ ಆರಂಭಿಸಿದ್ದರು. ಆ ಸಂದರ್ಭದಲ್ಲೂ ನನ್ನೊಂದಿಗೆ ಮಾಲಕ-ನೌಕರ ಸಂಬಂಧವನ್ನು ಬದಿಗಿಟ್ಟು ಬಹಳಷ್ಟು ಅನ್ಯೋನ್ಯತೆ ಹಾಗೂ ಪ್ರೀತಿಯನ್ನು ಹಂಚಿಕೊಂಡಿದ್ದರು ಎಂದು ಫಾರೂಕ್ ಅವರೊಂದಿಗಿದ್ದ ಒಡನಾಟ ಸ್ಮರಿಸಿಕೊಂಡ ಅವರು ಆ ಬಳಿಕ ಪತ್ರಕರ್ತನಾಗಿ ಸಾಮಾಜಿಕ ರಂಗಕ್ಕೆ ಬಂದ ಬಳಿಕವೂ ನನ್ನೊಂದಿಗಿದ್ದ ಆ ಅನ್ಯೋನ್ಯತೆ ಉಳಿಸಿಕೊಂಡು ಸದಾ ಸಂಪರ್ಕದಲ್ಲಿದ್ದರು ಎಂದು ಸ್ಮರಿಸಿಕೊಂಡರು.
ಫಾರೂಕ್ ಅವರ ಅಕಾಲಿಕ ಅಗಲಿಕೆ ಮನಸ್ಸಿಗೆ ಬಹಳಷ್ಟು ಆಘಾತ ಉಂಟು ಮಾಡುವುದರ ಜೊತೆಗೆ ತೀವ್ರ ದುಃಖವನ್ನೂ ಉಂಟು ಮಾಡಿದೆ ಎಂದು ಅತೀವ ಖೇದ ವ್ಯಕ್ತಪಡಿಸಿದ್ದಾರೆ. ಭಗವಂತನ ಅವರ ಆತ್ಮಕ್ಕೆ ಚಿರ ಶಾಂತಿ ನೀಡವುದರ ಜೊತೆಗೆ ಅವರ ಅಕಾಲಕ ಅಗಲಿಕೆ ಸಹಿಸುವ ಶಕ್ತಿಯನ್ನು ದೇವರು ಕುಟುಂಬಕ್ಕೂ ಹಿತೈಷಿಗಳಾದ ನಮಗೂ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
0 comments:
Post a Comment