ಮಂಗಳೂರು, ಅಕ್ಟೋಬರ್ 13, 2021 (ಕರಾವಳಿ ಟೈಮ್ಸ್) : ಅಂಚೆ ಇಲಾಖೆ ಮಂಗಳೂರು ವಿಭಾಗದಿಂದ ವಿಚಕ್ಷಣಾ ಸಪ್ತಾಹದ ಅಂಗವಾಗಿ “ಸ್ವತಂತ್ರ ಭಾರತ @75: ಪ್ರಾಮಾಣಿಕತೆಯೊಂದಿಗೆ ಸ್ವಾವಲಂಬನೆ” ವಿಷಯದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ.
ಪ್ರಬಂಧ ಸ್ಪರ್ಧೆಯು 5 ರಿಂದ 10ನೇ ತರಗತಿ ಹಾಗೂ ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ಎಂಬ ವಿಭಾಗವಾರು ನಡೆಯಲಿದ್ದು, ಪ್ರಬಂಧ ವಿಷಯ ಒಂದೇ ಆಗಿರುತ್ತದೆ. ಪ್ರಬಂಧವನ್ನು 1000 ಪದಗಳಿಗೆ ಮೀರದ ಹಾಗೆ ಬರೆದು “ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು ಅಂಚೆ ವಿಭಾಗ, ಅಂಚೆ ಭವನ, ಬಲ್ಮಠ, ಮಂಗಳೂರು-575002” ವಿಳಾಸಕ್ಕೆ ಅಕ್ಟೋಬರ್ 25 ರೊಳಗೆ ತಲುಪುವಂತೆ ಅಂಚೆ ಮೂಲಕ ಅಥವಾ ಸ್ಕ್ಯಾನ್ ಮಾಡಿದ ಪ್ರಬಂಧದ ಕೈಬರಹದ ಪ್ರತಿಯನ್ನು ಇ ಮೈಲ್ domangalore.ka@indiapost.gov.in ಗೆ ಕಳುಹಿಸಬೇಕು.
ಪ್ರಬಂಧವನ್ನು ಕನ್ನಡ, ಇಂಗ್ಲಿಷ್ ಅಥವಾ ಹಿಂದಿ ಭಾಷೆಯಲ್ಲಿ ಬರೆಯಬಹುದಾಗಿದ್ದು, ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಹೆಸರು, ತರಗತಿ, ಶಾಲೆಯ ಹೆಸರು, ತಂದೆ/ ತಾಯಿಯ ಹೆಸರು, ಮನೆ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ಪ್ರಬಂಧದ ಮೇಲ್ಬಾಗದಲ್ಲಿ ನಮೂದಿಸವಂತೆ ಮಂಗಳೂರು ಅಂಚೆ ವಿಭಾಗದ ಹಿರಿಯ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.
0 comments:
Post a Comment