ಬಂಟ್ವಾಳ, ಅಕ್ಟೋಬರ್ 19, 2021 (ಕರಾವಳಿ ಟೈಮ್ಸ್) : ತಾಲೂಕಿನ ವಿವಿಧ ಮಸೀದಿ-ಮದ್ರಸಗಳ ಆಶ್ರಯದಲ್ಲಿ ಮಂಗಳವಾರ ಹಝ್ರತ್ ಪ್ರವಾದಿ ಮುಹಮ್ಮದ್ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಜನ್ಮ ದಿನದ ಪ್ರಯುಕ್ತ ಸಂಭ್ರಮದ ಮೀಲಾದ್ ಆಚರಣೆ ಕೋವಿಡ್ ಮಾರ್ಗಸೂಚಿ ಅನುಸರಿಸಿ ಸರಳವಾಗಿ ನಡೆಸಲಾಗಿದೆ.
ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವತಿಯಿಂದ ಮಂಗಳವಾರ ಸರಕಾರದ ಕೋವಿಡ್ ಮಾರ್ಗಸೂಚಿಯಂತೆ ಸರಳವಾಗಿ ಈದ್ ಮಿಲಾದ್ ಆಚರಿಸಲಾಯಿತು.
ಮಸೀದಿ ಖತೀಬ್ ರಶೀದ್ ಯಮಾನಿ ನೇತೃತ್ವದಲ್ಲಿ ನಡೆದ ಮಿಲಾದ್ ಆಚರಣೆಯಲ್ಲಿ ಬಂಟ್ವಾಳ ಪುರಸಭಾ ಕೌನ್ಸಿಲರ್ ಅಬೂಬಕ್ಕರ್ ಸಿದ್ದೀಕ್, ಮಸೀದಿ ಅಧ್ಯಕ್ಷ ಮುಹಮ್ಮದ್ ಸಜಿಪ, ಪ್ರಮುಖರಾದ ಅಬೂಬಕ್ಕರ್ ಮೆಲ್ಕಾರ್, ಉಮ್ಮರುಲ್ ಫಾರೂಕ್, ಮಜೀದ್ ಬೋಗೋಡಿ, ಇಬ್ರಾಹಿಂ ದಾರಿಮಿ ಸದರ್ ಉಸ್ತಾದ್, ಅಬ್ದುಲ್ ರಹಿಮಾನ್ ಅನ್ಸಾರಿ, ಅನ್ಸಾರ್ ಸೌದಿ ಅರೇಬಿಯಾ, ಝಕರಿಯಾ ಬೋಗೋಡಿ, ಫೈಝಿ ಬೋಗೋಡಿ, ಮಜೀದ್ ಮೆಲ್ಕಾರ್, ಸಾದಿಕ್ ಮದೀನಾ, ಇಸ್ಮಾಯಿಲ್ ಯಮಾನಿ, ಹನೀಫ್ ಬೋಗೋಡಿ, ರಿಯಾಝ್ ಬೆಂಗಳೂರು ಮೊದಲಾದವರು ಭಾಗವಹಿಸಿದ್ದರು.
0 comments:
Post a Comment