ಬಂಟ್ವಾಳ, ಅಕ್ಟೋಬರ್ 19, 2021 (ಕರಾವಳಿ ಟೈಮ್ಸ್) : ತಾಲೂಕಿನ ವಿಟ್ಲ ಸಮೀಪದ ಅನಂತಾಡಿ ನಿವಾಸಿ ಸಂದೀಪ್ ಅವರ ಪತ್ನಿ ಸುಪ್ರೀತಾ ಅವರು ಹೇರಿಗೆ ನೋವಿನಿಂದ 108 ಅಂಬ್ಯುಲೆನ್ಸ್ ಮೂಲಕ ಸಾಗುತ್ತಿದ್ದ ವೇಳೆ ನೋವು ಉಲ್ಬಣಿಸಿ ಫರಂಗಿಪೇಟೆ ಸಮೀಪ ಅಂಬ್ಯುಲೆನ್ಸ್‍ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಹೆರಿಗೆ ನೋವು ಕಾಣಿಸಿಕೊಂಡಿದ್ದ ಹಿನ್ನಲೆಯಲ್ಲಿ ಸುಪ್ರಿತಾ ಅವರನ್ನು ಮಂಗಳವಾರ 108 ಅಂಬ್ಯುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ ನೋವು ಉಲ್ಬಣಿಸಿ ಫರಂಗಿಪೇಟೆ ತಲುಪುತ್ತಲೇ ಸುಪ್ರಿತಾ ಹೆಣ್ಣು ಮಗುವಿನ ಸುಖ ಪ್ರಸವ ನೀಡಿದ್ದಾರೆ.
ಅಂಬ್ಯುಲೆನ್ಸ್ ಸಿಬ್ಬಂದಿಗಳಾದ ದಿನೇಶ್ ಹಾಗೂ ವಿಜಯ್ ವಿಲ್ಸನ್ ಅವರು ಹೆರಿಗೆಗೆ ಸಹಕರಿಸಿದ್ದಾರೆ. ತಾಯಿ- ಮಗು ಆರೋಗ್ಯವಾಗಿದ್ದಾರೆ.
0 comments:
Post a Comment