ಬಂಟ್ವಾಳ, ಅಕ್ಟೋಬರ್ 12, 2021 (ಕರಾವಳಿ ಟೈಮ್ಸ್) : ಬಿ ಸಿ ರೋಡು ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಮಂಗಳವಾರ ಬೆಂಗಳೂರು ಕಡೆಗೆ ಕಾರುಗಳನ್ನು ಹೊತ್ತಕೊಂಡು ಸಾಗುತ್ತಿದ್ದ ಬೃಹತ್ ಕಂಟೈನರ್ ಲಾರಿ ಇಲ್ಲಿನ ಮೇಲ್ಸೇತುವೆ ಪಿಲ್ಲರಿಗೆ ಡಿಕ್ಕಿ ಹೊಡೆದು ನಿಂತಿದೆ.
ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಕಾರು ಸಾಗಿಸುತ್ತಿದ್ದ ಕಂಟೈನರ್ ಎದುರಿನ ಬಲ ಭಾಗ ಮೇಲ್ಸೇತುವೆ ಪಿಲ್ಲರಿಗೆ ಡಿಕ್ಕಿಯಾಗಿ ಭಾರೀ ಶಬ್ಧ ಕೇಳಿಬಂದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಂಟೈನರ್ ಚಾಲಕನ ಮೇಲ್ಭಾಗ ಕಳಚಿ ಹೋಗಿದ್ದು, ಮೇಲ್ಸೇತುವೆಯಲ್ಲಿ ಹೊಗೆ ಕಾಣಿಸಿಕೊಂಡಿದೆ.
0 comments:
Post a Comment