ನವದೆಹಲಿ, ನವೆಂಬರ್ 01, 2021 (ಕರಾವಳಿ ಟೈಮ್ಸ್) : ಈಗಾಗಲೇ ಎಲ್ಲ ಸ್ಥರಗಳಲ್ಲಿ ಆಗಿರುವ ಸತತ ಬೆಲೆ ಏರಿಕೆಯಿಂದ ಸಂಪೂರ್ಣ ತತ್ತರಿಸಿ ಹೋಗಿರುವ ಜನ ಜೀವನಕ್ಕೆ ಮತ್ತೆ ಶಾಕ್ ಎದುರಾಗಿದೆ. ಪೆಟ್ರೋಲ್-ಡೀಸೆಲ್ ಜೊತೆಗೆ ವಾಣಿಜ್ಯ ಬಳಕೆಯ ಗ್ಯಾಸ್ ಸಿಲೆಂಡರ್ ಬೆಲೆ ಕೂಡ ಗಣನೀಯವಾಗಿ ಏರಿಕೆಯಾಗಿದ್ದು, ಇಂದಿನಿಂದಲೇ ಪರಿಷ್ಕøತ ದರ ಜಾರಿಗೆ ಬರುತ್ತಿದೆ.
ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್ ಬೆಲೆ ಈ ಹಿಂದೆ 1,734/ ರೂಪಾಯಿ ಇದ್ದುದು ಇಂದಿನಿಂದ 2,050/- ರೂಪಾಯಿ ಆಗಲಿದೆ. ಬರೋಬ್ಬರಿ 266/- ರೂಪಾಯಿ ಹೆಚ್ಚಳ ಕಂಡಿದೆ. ಆದರೆ ಗೃಹ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಸದ್ಯ ಯಾವುದೇ ಹೆಚ್ಚಳವಾಗಿಲ್ಲ.
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಹೆಚ್ಚಳದಿಂದಾಗಿ ಆಹಾರ ಪದಾರ್ಥಗಳ ಬೆಲೆಯಲ್ಲೂ ಮುಂದಿನ ದಿನಗಳಲ್ಲಿ ಗಣನೀಯ ಏರಿಕೆ ಸಾಧ್ಯತೆ ಇದ್ದು, ಹೋಟೆಲ್ ಹಾಗೂ ಬೇಕರಿ ತಿಂಡಿ-ತಿನಿಸುಗಳ ಬೆಲೆಗಳಲ್ಲೂ ಏರಿಕೆಯಾಗುವ ಸಾಧ್ಯತೆಯಿದೆ.
0 comments:
Post a Comment